ಕೋಲಾರ: ಇಂದು ನಾಡಿನಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಆದರೆ, ಕೆಲವು ಕಡೆ ಅಜಾಗರೂಕತೆಯಿಂದ ಅವಘಡಗಳು ಸಂಭವಿಸಿವೆ.
ಕೋಲಾರ, ಕೊಪ್ಪಳದಲ್ಲಿ ಇಂತಹ ಯಡವಟ್ಟು ಬೆಳಕಿಗೆ ಬಂದಿದೆ. ಸಂಭ್ರಮದ ಮಧ್ಯೆ ಯಡವಟ್ಟು ಸಂಭವಿಸಿದ್ದಕ್ಕೆ ಜನರು ಬೇಸರಿಸಿಕೊಂಡಿದ್ದಾರೆ. ಕೋಲಾರದಲ್ಲಿ ಕನ್ನಡ ಬಾವುಟ (Kannada Flag) ಧ್ವಜಾರೋಹಣ ವೇಳೆ ಧ್ವಜಕಂಬದಿಂದ ಬಾವುಟ ಕೆಳಗೆ ಬಿದ್ದಿದೆ. ಕೋಲಾರ (Kolar) ನಗರದ ಎಂ.ಜಿ.ರಸ್ತೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಸೇರಿದಂತೆ ಶಾಸಕ, ಸಂಸದರು ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆನಂತರ ಯುವಕನೋರ್ವ ಮತ್ತೆ ಧ್ವಜ ಕಂಬಕ್ಕೆ ಹತ್ತಿ ಕನ್ನಡ ಧ್ವಜ ಕಟ್ಟಿದ್ದಾನೆ.
ಜಿಲ್ಲೆಯಾದ್ಯಂತ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ.








