ನವದೆಹಲಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಪ್ಪದ ಸ್ನೇಹಿತನನ್ನು 20 ವರ್ಷದ ಯುವಕ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ದೆಹಲಿಯ (Delhi) ಡಿಡಿಎ ಪಾರ್ಕ್ ಮೋರಿ ಗೇಟ್ ಹತ್ತಿರ ನಡೆದಿದೆ. ಉತ್ತರ ಪ್ರದೇಶ (Uttar Pradesh) ಜಲೋನ್ ಜಿಲ್ಲೆಯ ರುದೂರಪುರ ಗ್ರಾಮದ ಪ್ರಮೋದ್ ಕುಮಾರ್ ಶುಕ್ಲಾ ಕೊಲೆಯಾಗಿರುವ ವ್ಯಕ್ತಿ. ರಾಜೇಶ್ ಕೊಲೆ ಮಾಡಿರುವ ಆರೋಪಿ. ಆರೋಪಿ ಹಾಗೂ ಕೊಲೆಯಾದ ವ್ಯಕ್ತಿ ಇಬ್ಬರೂ ಒಂದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಒಂದೆ ಕಡೆ ವಾಸಿಸುತ್ತಿದ್ದರು.
ಈ ಕುರಿತು ಆರೋಪಿ ರಾಜೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಕುರಿತು ಬಾಯಿಬಿಟ್ಟಿದ್ದಾನೆ. ಸ್ನೇಹಿತನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸುವಂತೆ ಒತ್ತಡ ನೀಡಿದ್ದ. ಅಸ್ವಾಭಾವಿಕ ಲೈಂಗಿಕತೆಯನ್ನು ಪ್ರಮೋದ್ ನಿರಾಕರಿಸಿದ್ದಾನೆ. ಇದಕ್ಕೆ ಮತ್ತಷ್ಟು ಕೋಪಗೊಂಡ ರಾಜೇಶ್ ಜಗಳ ಮಾಡಿದ್ದಾನೆ. ಹೀಗಾಗಿ ದಾರುಣವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಪ್ರಮೋದ್ ಹತ್ತಿರ ಇದ್ದ 18,500 ರೂ. ಹಾಗೂ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.