ಇತ್ತೀಚೆಗೆ ತಿನ್ನುವ ಆಹಾರದಲ್ಲಿ ಹಲವಾರು ವಿಷ ಜಂತುಗಳು ಹಾಗೂ ಮಾನವನ ಅಂಗಾಂಗಳು ಪತ್ತೆಯಾಗುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಸದ್ಯ ಮತ್ತೆ ಇಂತಹುದೇ ಘಟನೆಯೊಂದು ವರದಿಯಾಗಿದೆ.
ಈ ಘಟನೆ ಗುಜರಾತಿನಲ್ಲಿ ನಡೆದಿದೆ. ಚಿಪ್ಸ್ ಪ್ಯಾಕೆಟಿನಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿರುವ ಘಟನೆ ಗುಜರಾತಿನ ಜಾಮ್ ನಗರದ ಪುಷ್ಕರಧಾಮ್ ಸೊಸೈಟಿ ಎಂಬಲ್ಲಿ ನಡೆದಿದೆ. ಇದನ್ನು ಕಂಡು ಅಲ್ಲಿನ ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಪುಷ್ಕರ್ ಧಾಮ್ ಸೊಸೈಟಿಯ ಜಸ್ಮೀತ್ ಪಟೇಲ್ ಎಂಬುವವರು ಜೂನ್ 18ರಂದು ವೇಫರ್ ಪ್ಯಾಕೆಟ್ ಖರೀದಿಸಿದ್ದರು. ಅವರು ಅರ್ಧದಷ್ಟು ಪ್ಯಾಕೆಟ್ ನ್ನು ರಾತ್ರಿಯೇ ತಿಂದು ಮುಗಿಸಿದ್ದಾರೆ. ಆದರೆ, ಮತ್ತೆ ಬೆಳಿಗ್ಗೆ ಚಿಪ್ಸ್ ತಿನ್ನಲು ಹೋದಾಗ ಪ್ಯಾಕೆಟ್ ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ. ಇದನ್ನು ಕಂಡು ಅವರ ಆತಂಕಗೊಂಡಿದ್ದಾರೆ.
ಜಸ್ಮೀತ್ ಪಟೇಲ್ ಕೂಡಲೇ ಜಾಮ್ ನಗರದ ಮುನ್ಸಿಪಲ್ ಕಾರ್ಪೊರೇಷನ್ ಆಹಾರ ಶಾಖೆಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ವೈದ್ಯರೊಬ್ಬರು ಐಸ್ ಕ್ರೀಮ್ ಆರ್ಡರ್ ಮಾಡಿದ್ದಾಗ. ಐಸ್ ನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದ ಘಟನೆ ನೆಡೆದಿತ್ತು. ಈ ಘಟನೆ ಮಾಸುವ ಬೆನ್ನಲ್ಲಿಯೇ ಈ ಘಟನೆ ನಡೆದಿರುವುದು, ಜನರಲ್ಲಿ ಆತಂಕ ಮೂಡಿಸುತ್ತಿದೆ. ಪ್ಯಾಕೆಟ್ ಮಾಡಿರುವ ಆಹಾರ ಖರೀದಿಸಲು ಹಿಂದೆ ಮುಂದೆ ನೋಡುವಂತಾಗುತ್ತಿದೆ.