National: ಚಿನ್ನವನ್ನು ವಿಗ್ ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಖತರ್ನಾಕ ಕಳ್ಳನ ಬಂಧನ
1 min read
ಚಿನ್ನವನ್ನು ವಿಗ್ ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಖತರ್ನಾಕ ಕಳ್ಳನ ಬಂಧನ
ನವದೆಹಲಿ:ವ್ಯಕ್ತಿಯೊಬ್ಬ ತನ್ನ ವಿಗ್ ಮತ್ತು ಗುದನಾಳದಲ್ಲಿ ಚಿನ್ನವನ್ನು ಇಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗ ಕೈಗೆ ಸಿಕ್ಕಿಬಿದ್ದಿದ್ದಾನೆ.
ನವದೆಹಲಿಯ ಇಂದಿರಾಗಾಂಧಿ ಇಂಟರ್ನ್ಯಾಶನಲ್ (ಎಲ್ಎಫ್ಟಿ) ವಿಮಾನ ನಿಲ್ದಾಣದ ವ್ಯಕ್ತಿ ಸಿಕ್ಕಿಬಿದ್ದಿದ್ದು, ಈತನಿಂದ 30.55 ಲಕ್ಷ ರೂ. ಮೌಲ್ಯದ ಚಿನ್ನ (630.45 ಗ್ರಾಂ) ವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
#WATCH | Delhi: A gold smuggling case booked on a passenger from Abu Dhabi at IGI Airport T3; approx 630.45g of gold worth Rs 30.55 lakhs was concealed inside his wig & rectum. Accused arrested; further probe underway: Customs Commissioner Office
(Source: Delhi Customs) pic.twitter.com/2faJD8f1Vu
— ANI (@ANI) April 20, 2022
ಈತ ಅಬುಧಾಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವ್ಯಕ್ತಿಯ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು 3ನೇ ಟರ್ಮಿನಲ್ನಲ್ಲಿ ತಡೆದು, ಪರಿಶೀಲಿಸಿದ್ದಾರೆ. ಈ ವೇಳೆ ಆಸಾಮಿ ತನ್ನ ವಿಗ್ನಲ್ಲಿ ವಿಗ್ನಲ್ಲಿ ಹಾಗೂ ಗುದನಾಳದಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ನಂತರ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.