ಹಾಂಗ್ ಕಾಂಗ್: ಚೀನಾ ಸೇನೆ ಹಾಗೂ ಫಿಲಿಪ್ಪೈನ್ಸ್ ಸೇನೆಗಳ ಮಧ್ಯೆ ಭಾರೀ ಫೈಟ್ ನಡೆದಿರುವ ಘಟನೆ ನಡೆದಿದೆ.
ದಕ್ಷಿಣ ಚೀನಾ ಸಮುದ್ರಲ್ಲಿ ( South China Sea) ಗಲ್ವಾನ್ ಮಾದರಿಯಲ್ಲಿ ಫೈಟ್ ನಡೆದಿದೆ ಎನ್ನಲಾಗಿದೆ. ಚೀನಾ ಸೇನೆ ಮತ್ತು ಫಿಲಿಪ್ಪೈನ್ಸ್ (Philippines) ಸೇನೆಗಳ ನಡುವೆ ಭಾರೀ ಫೈಟ್ ನಡೆದಿದೆ.
ಫಿಲಿಪ್ಪೈನ್ಸ್ ಸೇನೆಯ ಹಡಗುಗಳ ಮೇಲೆ ಚೀನಾದ (China) ಕರಾವಳಿ ಪಡೆ ದಾಳಿ ನಡೆಸಿದೆ. ಈ ವೇಳೆ ಮಚ್ಚು, ಕೊಡಲಿ, ಸುತ್ತಿಗೆಗಳಿಂದ ಫಿಲಿಪ್ಪೈನ್ಸ್ ಹಡಗುಗಳನ್ನು ಧ್ವಂಸ ಮಾಡಲು ಚೀನಾ ಸೈನಿಕರು ಯತ್ನಿಸಿದ್ದಾರೆ. ಫಿಲಿಪ್ಪೈನ್ಸ್ ಹಡಗಿನಲ್ಲಿದ್ದ ಎಕೆ47 ರೈಫಲ್, ದಿಕ್ಸೂಚಿಯ ಪರಿಕರಗಳನ್ನು ಚೀನಾ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಪಿಲಿಪ್ಪೈನ್ಸ್ ನ ಹಲವು ಸೈನಿಕರು ಗಾಯಗೊಂಡಿದ್ದಾರೆ. ಓರ್ವ ಯೋಧನ ಹೆಬ್ಬೆರಳು ತುಂಡಾಗಿದೆ. ಫಿಲಿಪ್ಪೈನ್ಸ್ ಹಡಗುಗಳು ಕದಲದಂತೆ ಚೀನಾ ಪಡೆಗಳು ಸುತ್ತುವರೆದಿದ್ದವು. ಆದರೂ ಬರಿಗೈಯಲ್ಲೇ ಫಿಲಿಪ್ಪೈನ್ಸ್ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಚೀನಾ ವಿರುದ್ಧ ಫಿಲಿಪ್ಪೈನ್ಸ್ ಆಕ್ರೋಶ ಹೊರಹಾಕಿದೆ.