ಚಾಮರಾಜನಗರ: ಕಾಡಾನೆ ಹಿಂಡು ತಮ್ಮ ಮರಿಗಳೊಂದಿಗೆ ಕಾವೇರಿ ನದಿ ದಾಟಿರುವ ಘಟನೆಯೊಂದು ಜಿಲ್ಲೆಯ ಹೊಗೇನಕಲ್ ಜಲಪಾತದ ಹತ್ತಿರ ಕಂಡು ಬಂದಿದೆ.
ಸುಮಾರು 20ಕ್ಕೂ ಅಧಿಕ ಆನೆಗಳು ಕಾವೇರಿ ನದಿ ದಾಟಿವೆ. ನದಿ ಅಕ್ಕಪಕ್ಕದಲ್ಲಿಯೇ ಕಾಡಾನೆ ಹಿಂಡು ವಿಹರಿಸುತ್ತಿದ್ದು, ಮೇಯುತ್ತಾ ಆರಾಮಾಗಿ ನದಿ ದಾಟಿವೆ. ಈ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.