ರಾಮನಗರ: ಗೋದಾಮಿನಲ್ಲಿodo 1,600 ಕ್ವಿಂಟಾಲ್ ಪಡಿತರ ನಾಪತ್ತೆ (Ration Rice)ಯಾಗಿದ್ದು, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಚನ್ನಪಟ್ಟಣ ತಾಲೂಕು ಆಹಾರ ಶಿರಸ್ತೇದಾರ್ ಶಾಂತಕುಮಾರಿ, ಆಹಾರ ನಿರೀಕ್ಷಕ ಕೆ.ಚೇತನ್ ಕುಮಾರ್ ಅಮಾನತು ಮಾಡಿ ಇಲಾಖೆಯ ಆಯುಕ್ತ ವಾಸಿರೆಡ್ಡಿ ವಿಜಯ ಜ್ಯೋತ್ಸ ಆದೇಶ ಹೊರಡಿಸಿದ್ದಾರೆ. ಪ್ರತಿ ತಿಂಗಳ ಅಂತ್ಯದಲ್ಲಿ ಸಗಟು ಮಳಿಗೆಗಳಲ್ಲಿ ಹಂಚಿಕೆಯಾದ ನಂತರ, ಉಳಿಕೆಯಾಗುವ ಅಂತಿಮ ದಾಸ್ತಾನಿನ ಪ್ರಮಾಣ ಮಾಹಿತಿ ಪಡೆದಿಲ್ಲ ಎಂದು ಅವರ ಮೇಲೆ ಆರೋಪ ಕೇಳಿ ಬಂದಿದೆ. ಇದಕ್ಕೂ ಮುನ್ನ ಆಹಾರ ಇಲಾಖೆ ಆಯುಕ್ತರು ತಾಲೂಕು ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಮಾಡಿದ್ದರು. ಅಧಿಕಾರಿಗಳು ನೀಡಿದ ಸಮಜಾಯಿಷಿ ಒಪ್ಪದ ಆಹಾರ ಇಲಾಖೆ ಆಯುಕ್ತರು ಟಿಎಪಿಸಿಎಂಎಸ್ ಗೋದಾಮಿನ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಚನ್ನಪಟ್ಟಣ ತಾಲೂಕು ಸಾತನೂರು ಸರ್ಕಲ್ ಹತ್ತಿರ ಇದ್ದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪಡಿತರ ಆಹಾರ ವಿತರಣಾ ಗೋದಾಮಿನಲ್ಲಿ 1,600 ಕ್ವಿಂಟಾಲ್ (3000 ಮೂಟೆ 50 ಲಕ್ಷ ರೂ ಅಂದಾಜು ಮೌಲ್ಯ) ಅಕ್ಕಿ ನಾಪತ್ತೆಯಾಗಿತ್ತು.