ಬೆಂಗಳೂರು : ಸಹೋದರಿಯ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಜಗಳದಲ್ಲಿ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ನಡೆದಿದೆ.
ನಗರದ ಸುಂಕದಕಟ್ಟೆ ಸೊಲ್ಲಾಪುರದಮ್ಮ ದೇವಸ್ಥಾನ ಹತ್ತಿರ ಈ ಘಟನೆ ನಡೆದಿದೆ. ಜಯಪ್ರಕಾಶ್(32) ತನ್ನ ಪತ್ನಿ ದಿವ್ಯಶ್ರೀ (26)ಗೆ ಚಾಕು ಇರಿದಿದ್ದಾನೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಯಪ್ರಕಾಶ್ ಹಾಗೂ ದಿವ್ಯಶ್ರೀ ಇಬ್ಬರೂ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಪೋಷಕರ ವಿರೋಧ ಹಿನ್ನಲೆ ಬೆಂಗಳೂರಲ್ಲಿ ವಾಸವಾಗಿದ್ದರು. ಗಂಡನಿಗೆ ಅನಾರೋಗ್ಯ ಹಿನ್ನಲೆ ಮನೆಯ ಖರ್ಚುಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಈ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಮನೆಯ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರೂ ಜಗಳ ಸಾಮಾನ್ಯವಾಗಿತ್ತು. ಪತ್ನಿಯ ಮೇಲೆ ಜಯಪ್ರಕಾಶ್ ಅನುಮಾನ ಪಡುತ್ತಿದ್ದ. ತನ್ನ ತಂಗಿಯ ಎಂಗೇಜ್ಮೆಂಟ್ಗೆ ಬರಲಿಲ್ಲ ಎಂಬ ಕೋಪದಲ್ಲಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ದಿವ್ಯಶ್ರೀ ಕಾಲಿಗೆ ಗಾಯಗಳಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.