ಹೈದರಾಬಾದ್: ಚುನಾವಣೆಯಲ್ಲಿ ಮತದಾರ ಯಾರತ್ತ, ಯಾವ ಸಮಯದಲ್ಲಿ ಯಾರಿಗೆ ಜೈ ಎನ್ನುತ್ತಾರೆ ಎಂಬುವುದೇ ತಿಳಿಯುವುದಿಲ್ಲ. ಈಗ ಘಟನುಘಟಿಗಳ ಎದುರು ಎಮ್ಮೆ ಕಾಯುವ ಹುಡುಗಿ ಲೀಡ್ ನಲ್ಲಿದ್ದಾರೆ.
ಇದು ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿದೆ. ಬರೆಲಕ್ಕ ಅಕಾ ಕಾರ್ಣೆ ಶಿರೀಷಾ (Barrelakka Karni Shireesha) ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ಮುನ್ನಡೆ ಸಾಧಿಸಿದ್ದಾರೆ. ಅವರು, ಜುಪಲ್ಲಿ ಕೃಷ್ಣರಾವ್ ಎದುರು ಮುನ್ನಡೆ ಸಾಧಿಸಿದ್ದಾರೆ.
25 ವರ್ಷದ ಶಿರೀಷಾ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಮುನ್ನ ರಾಜ್ಯಾದ್ಯಂತ ಖ್ಯಾತಿ ಗಳಿಸಿದ್ದರು. ಇನ್ಸ್ಟಾಗ್ರಾಂ ವಿಡಿಯೋ 2021ರಲ್ಲಿ ಬಹಳ ವೈರಲ್ ಆಗಿತ್ತು. ಪದವಿ ಪಡೆದಿದ್ದರೂ ಕೆಲಸ ಸಿಕ್ಕಿಲ್ಲ. ಅಮ್ಮನಿಂದ ಹಣ ಪಡೆದು 4 ಎಮ್ಮೆ ಖರೀದಿಸಿದ್ದೇನೆ ಎಂದು ಹೇಳಿದ್ದರು. ವಿಡಿಯೋ ದೊಡ್ಡ ವೈರಲ್ ಆಗಿಹೋಗಿತ್ತು. ಆಗಿನಿಂದ ಆಕೆಯ ಹೆಸರು ಬರ್ರೆಲಕ್ಕ ಎಂದೇ ಖ್ಯಾತವಾಗಿದೆ. ಬರ್ರೆಲ ಎಂದರೆ ತೆಲುಗಿನಲ್ಲಿ ಎಮ್ಮೆ ಎಂದರ್ಥ. ಹೀಗಾಗಿ ಜನರು ಶಿರೀಷಾ ಅವರು ಮತ್ತೊಂದು ವಿಷಯದಲ್ಲಿ ಖ್ಯಾತರಾಗುತ್ತಿದ್ದಾರೆ.