ಬಾಗಲಕೋಟೆ: ಬೈಕ್ಗೆ ಹಿಂಬದಿಯಿಂದ ಲಾರಿ ಡಿಕ್ಕಿ (collides) ಹೊಡೆದ ಪರಿಣಾಮ ವೃದ್ಧೆ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಹುನಗುಂದ ತಾಲೂಕಿನ ರಕ್ಕಸಗಿ ಹತ್ತಿರ ನಡೆದಿದೆ.
ರಕ್ಕಸಗಿ ಗ್ರಾಮದ ನಿವಾಸಿ ಶ್ರೀಕಾಂತ್ ಮಾದಾರ(39), ಶಾಂತವ್ವ ಕಟ್ಟಿಮನಿ(43), ಮಾಂತವ್ವ ಮುರಡಿ(75) ಸಾವನ್ನಪ್ಪಿದ ದುರ್ದೈವಿಗಳು. ಘಟನಾ ಸ್ಥಳಕ್ಕೆ ಅಮೀನ್ಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.