ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನು ಕೊಂದ ಪ್ರಿಯಕರ
ಚೆನ್ನೈ: ಲೈಂಗಿಕ ಸಂಭಂದ ಹೊಂದಲು ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿ ಪ್ರಿಯತೆಮೆಯನ್ನು ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಕನ್ನಮ್ಮ ಮೃತ ದುರ್ದೈವಿ. 35 ವರ್ಷದ ರಾಜಾ ಕೊಲೆ ಆರೋಪಿ. ಮಾರ್ಚ್ 19 ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಬಸ್ ನಿಲ್ದಾಣವೊಂದರಲ್ಲಿ ಒಬ್ಬನೇ ಕುಳಿತುಕೊಂಡಿದ್ದನು. ಈ ವೇಳೆ ಶರ್ಟ್ ರಕ್ತದ ಕಲೆಯಾಗಿದ್ದನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ.
ವಿಷಯವನ್ನು ತಿಳಿದ ಪೊಲೀಸರು ಆತನನ್ನು ಆತನ ಮನೆಗೆ ಕರೆದುಕೊಂಡು ಹೋದಾಗ ಮಹಿಳೆಯೊಬ್ಬರು ಚಾಕುವಿನ ಇರಿತದಿಂದ ಗಾಯಗೊಂಡು ಅರೆಬೆತ್ತಲೆಯಾಗಿ ಮಲಗಿರುವುದನ್ನು ಕಂಡಿದ್ದಾರೆ.
ರಾಜಾ ಹಾಗೂ ಕನ್ನಮ್ಮ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಾಡಿಗೆ ಮನೆಯಲ್ಲಿ ವಾಸವಿದ್ದ ಆಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಶನಿವಾರ ರಾತ್ರಿ ಕುಡಿದ ಅಮಲಿನಲ್ಲಿ ರಾಜಾ ಆಕೆಯ ಮನೆಗೆ ಬಂದು ಆಕೆಯನ್ನು ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದು, ಈ ವೇಳೆ ಕನ್ನಮ್ಮ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಜೋರಾಗಿ ಜಗಳವಾಗಿದೆ. ಈ ವೇಳೆ ಮಹಿಳೆಯ ಚೀರಾಟ ಕೇಳಿ ನೆರೆಹೊರೆಯವರು ಮಧ್ಯ ಪ್ರವೇಶಿಸಿ ರಾಜಾನನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.
ಆದರೆ ರಾತ್ರಿ ಎಲ್ಲರೂ ಮಲಗಿದ ಬಳಿಕ ಮನೆಗೆ ಮರಳಿ ಬಂದ ರಾಜ ಆಕೆಯನ್ನು ಮನೆಯೊಳಗೆ ಕೂಡಿಹಾಕಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದೀಗ ಕುಂದ್ರತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ತನ್ನ ಪ್ರಿಯತಮೆಯನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.