ಪ್ರೀತಿಸಿದ ಯುವತಿ ತನಗೆ ಕೈಕೊಟ್ಟು ಹೆತ್ತವರ ಜೊತೆ ಹೋಗಲು ಒಪ್ಪಿದ್ದರಿಂದಾಗಿ ಮನನೊಂದ 31 ವರ್ಷದ ಯುವಕ ಕೋರ್ಟ್ ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಇವರಿಬ್ಬರ ಪ್ರೀತಿಯ ವಿಚಾರ ಕೋರ್ಟ್ ಮೆಟ್ಟಿಲು ಏರಿತ್ತು. ಈ ಸಂದರ್ಭದಲ್ಲಿ ಯುವತಿ, ನಾನು ಯಾರನ್ನೂ ಪ್ರೀತಿಸಿಲ್ಲ. ಆತ ತನ್ನ ಅಣ್ಣನ ಸಮಾನ ಎಂದು ಹೇಳಿದ್ದಳು. ಇದಕ್ಕೆ ಬೇಸರಗೊಂಡ ಯುವಕು, ಕೋರ್ಟ್ನಲ್ಲೇ ತನ್ನ ಕೈ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ವಿಷ್ಣು ಎಂಬ ವ್ಯಕ್ತಿ ನ್ಯಾಯಮೂರ್ತಿ ಅನು ಶಿವರಾಮನ್ ಅವರ ಕೊಠಡಿ ಎದುರು ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 31 ವರ್ಷದ ವಿಷ್ಣು ಮತ್ತು 23 ವರ್ಷದ ಯುವತಿ ಸುಮಾರು 1 ತಿಂಗಳ ಕಾಲ ಒಟ್ಟಿಗೆ ಇದ್ದರು. ಹೀಗಾಗಿ ತಮ್ಮ ಮಗಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಯುವತಿಯ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅವರಿಬ್ಬರು ಕೋರ್ಟ್ ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಯುವತಿಯು ನಾನು ಯಾರನ್ನೂ ಪ್ರೀತಿ ಮಾಡಿಲ್ಲ. ನಾನು ನನ್ನ ಕುಟುಂಬದೊಂದಿಗೆ ಹೋಗಲು ಬಯಸುತ್ತೇನೆ ಎಂದು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಸಿ. ಜಯಚಂದ್ರನ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಿದ್ದಳು.