ಪುಣೆ : ಕಾಮುಕನೊಬ್ಬ ಎಮ್ಮೆ ಕರು ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಕೊಟ್ಟಿಗೆಯಲ್ಲಿದ್ದ ಎಮ್ಮೆಯ ಕರುವಿನ ಮೇಲೆ 24 ವರ್ಷದ ಯುವಕನೊಬ್ಬ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದ್ದು, ಆತ ಪದೇ ಪದೇ ಈ ದುಷ್ಕೃತ್ಯ ನಡೆಸಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಎಮ್ಮೆಯ ಪಕ್ಕದಲ್ಲಿ ಸಣ್ಣ ಕರು ಇತ್ತು. ಯುವಕ ಕೊಟ್ಟಿಗೆಗೆ ಬಂದು ಲೈಟ್ ಆಫ್ ಮಾಡಿ, ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಸಿಸಿಟಿವಿಯ ಬೆಳಕಿನಲ್ಲಿ ಅರೆಬರೆಯಾಗಿ ದೃಶ್ಯ ಸೆರೆಯಾಗಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧಿಸಲಾಗಿದೆ. ಕೆಲವು ದಿನಗಳಿಂದ ಕರುವಿನ ಆರೋಗ್ಯ ಏರುಪೇರಾಗಿತ್ತು. ರಕ್ತಸ್ರಾವವೂ ಆಗಿತ್ತು. ತಮ್ಮ ಮನೆಯ ಎಮ್ಮೆ ಕರುವಿನ ಮೇಲೆ ಯಾರೋ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಾಲೀಕ ದೂರು ನೀಡಿದ್ದ.
ಆಗಾಗ ಈ ಘಟನೆಗಳು ನಡೆಯುತ್ತಲೇ ಇದ್ದವು ಎನ್ನಲಾಗಿದ್ದು, ಇತ್ತೀಚೆಗೆ ಕರುವಿನ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ಇದನ್ನು ಗಮನಿಸಿದ ಮಾಲೀಕರು, ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಚಿಖಾಲಿ ಪ್ರದೇಶದಲ್ಲಿ ನೆಲೆಸಿರುವ ರಾಮಕಿಶನ್ ಚವ್ಹಾಣ್ ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಸದ್ಯ ಆತನನ್ನು ಬಂಧಿಸಲಾಗಿದೆ.