ಬೆಂಗಳೂರು: ಚಂದ್ರಗ್ರಹಣವೂ ಯಾವುದೇ ದೇಶದಲ್ಲಿ ಸಂಪೂರ್ಣವಾಗಿ ಕಾಣಿಸುವುದಿಲ್ಲ ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ್ ಹೇಳಿದ್ದಾರೆ.
ಚಂದ್ರ ಗ್ರಹಣವು ಬೆಳಗಿನ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷವಾಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಎಂದು ಅವರು ಹೇಳಿದ್ದಾರೆ. ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನು ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲಿಯೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ ಎಂದು ಹೇಳಿದ್ದಾರೆ.








