ಆಸ್ತಿಗಾಗಿ ಅಣ್ಣನನ್ನು ಕೊಲೆ ಮಾಡಿದ ತಮ್ಮ
ಕಲಬುರಗಿ: ಹೋಳಿ ಹುಣ್ಣಿಮೆ ನಿಮಿತ್ತ ಪೂನಾದಿಂದ ಮರಳಿ ಸ್ವಗ್ರಾಮಕ್ಕೆ ಆಗಮಿಸಿದ್ದವನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಪ್ರಕರಣ ವರದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮನೋಹರ ರುದ್ರಕರ್ (36) ಕೊಲೆಯಾದ ದುರ್ದೈವಿ. ಸುನೀಲಕುಮಾರ ಶಾಂತಪ್ಪ ರುದ್ರಕರ್ ಹಾಗೂ ಸಹಚರನಾದ ಕೃಷ್ಣಾ ಮದನಕರ್ ಬಂಧಿತ ಆರೋಪಿಗಳು. ಇವರು ಕಲಬುರಗಿಯ ಸುಲ್ತಾನಪುರದ ನಿವಾಸಿಗಳಾಗಿದ್ದು, ಕೊಲೆ ಮಾಡಿ, ಸುಟ್ಟುಹಾಕಿದ ಆರೋಪದ ಮೇರೆಗೆ ಕಲಬುರಗಿಯ ಅರ್ಬನ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಮಾರ್ಚ 17 ರಂದು ಮನೋಹರ ರುದ್ರಕರ್ ಹೋಳಿ ಹುಣ್ಣಿಮೆ ನಿಮಿತ್ತ ಮಹರಾಷ್ಟ್ರದ ಪುನಾದಿಂದ ಸ್ವಗ್ರಾಮ ತಾಜಸುಲ್ತಾನಪುರಕ್ಕೆ ಬಂದಿದ್ದರು. ಅಂದಿನ ರಾತ್ರಿ ಮುಗಿಸಿ ಹೊರಬಂದವರು ಮರಳಿ ಮನೆಗೆ ಹೋಗಿರಲಿಲ್ಲ. ಅವರ ದೇಹ ಗ್ರಾಮದ ಹೊರವಲಯದಲ್ಲಿ ಅರ್ಧಂಬರ್ಧ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ಆರೋಪಿ ಬಲೆಗೆ ಬಿದ್ದಿದ್ದು, ಸ್ವಂತ ತಮ್ಮ ಸುಶೀಲಕುಮಾರ ಅಣ್ಣನನ್ನು ಕೊಲೆ ಮಾಡಿದ್ದಾನೆ. ಸುಶೀಲಕುಮಾರನ ಕೈಗೆ ಪೊಲೀಸರು ಬೇಡಿ ಹಾಕಿದ್ದಾರೆ. .
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಕಾರಣವನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾ. ಆಸ್ತಿಗಾಗಿ ಅಣ್ಣನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದೇ ಗ್ರಾಮಕ್ಕೆ ಕಳೆದ ಎಂಟತ್ತು ವರ್ಷಗಳ ಹಿಂದೆ ಆಗಮಿಸಿದ ಮನೋಹರನ ಕುಟುಂಬ, ಮಾವನ ಮನೆಯಲ್ಲಿಯೇ ಬಾಡಿಗೆ ಪಡೆದು ವಾಸವಾಗಿದ್ದತ್ತು. ಇದೀಗ ಮಾವ ಹಾಗೂ ಹೆಂಡತಿ ಮತ್ತು ಮನೋಹರ ಎಲ್ಲರೂ ಪುಣೆಯಲ್ಲಿ ವಾಸವಿದ್ದಾರೆ. ಆದರೆ, ತಾಜಸುಲ್ತಾನಪುರ ಗ್ರಾಮದ ಮನೆಯಲ್ಲಿದ್ದವರಿಗೆ ಮನೆ ಖಾಲಿ ಮಾಡುವಂತೆ ಹೇಳಿದರು ಖಾಲಿ ಮಾಡಿದ್ದಿಲ್ಲ. ಈ ಸಂಬಂಧ ಕಳೆದ ಏಳು ವರ್ಷದಿಂದ ಆಗಾಗ ಮನೆಯಲ್ಲಿನ ಗಲಾಟೆ ನಡೆಯುತ್ತಿತ್ತು.
ಹೋಳಿ ಹುಣ್ಣಿಮೆಗೆ ಬಂದಿದ್ದ ಮನೋಹರ ತನ್ನ ಸಹೋದರ ಸುಶೀಲಕುಮಾರ ಜೊತೆ ಜಗಳ ತೆಗೆದು ತನ್ನ ಮಾವನ ಮನೆ ಖಾಲಿ ಮಾಡುವಂತೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಸುಶೀಲಕುಮಾರ, ಅಣ್ಣ ಮನೆಯಿಂದ ಹೊರಬರುವುದನ್ನು ಗಮನಿಸಿ ಜಗಳ ತೆಗೆದು ಥಳಿಸಿದ್ದಾನೆ. ಜಗಳದಲ್ಲಿ ಮನೋಹರ ಸಾವನ್ನಪ್ಪಿದ್ದಾನೆ.
ಆಗ ಸುಶೀಲ ತನ್ನ ಇನ್ನೊಬ್ಬ ಸ್ನೇಹಿತ ಕೃಷ್ಣಾ ಮದನಕರ್ ಸಹಾಯ ಪಡೆದು ಬೈಕ್ ಮೇಲೆ ಶವ ತೆಗೆದುಕೊಂಡು ಹೋಗಿ ಊರ ಹೊರಗಡೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ. ಕೊಲೆ ಆರೋಪದಡಿ ಆತನ್ನು ಬಂಧಿಸಿದ್ದಾರೆ.