ಮಹಿಳೆ ಮನೆಗೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡು ಸತ್ತ ವ್ಯಕ್ತಿ
ಕೇರಳ: ವ್ಯಕ್ತಿಯೋರ್ವ ಮಹಿಳೆ ಮನೆಗೆ ಬಂಕಿ ಹಚ್ಚಿ ನಂತರ ತಾನೂ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾದಪುರಂನಲ್ಲಿ ನಡೆದಿದೆ.
ರತ್ನೇಶ್ (41) ಮೃತ ದುರ್ದೈವಿ. ಈತ ಮಂಗಳವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಮಹಿಳೆ ಮನೆಗೆ ಬಂಕೆ ಹಚ್ಚಲು ಬಂದು, ಮನೆಗೆ ಬೆಂಕಿ ಹಚ್ಚಿ ತಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು? ಮಂಗಳವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ರತ್ನೇಶ್ ತನ್ನ ಮನೆಯಿಂದ ಅರ್ಧ ಕೀ.ಮಿ ದೂರವಿರುವ ಮಹಿಳೆ ಮನೆಗೆ ಬೆಂಕಿ ಹಚ್ಚಲು ಸಂಚು ರೂಪಿಸಿದ್ದ. ಸಂಚಿನಂತೆ ರತ್ನೇಶ್ ಕಬ್ಬಿಣದ ಏಣಿ ಸಮೇತ ಮಹಿಳೆ ಮನೆಗೆ ಬಂದಿದ್ದಾನೆ. ಏಣಿ ಬಳಸಿ ಎರಡನೇ ಮಹಡಿ ಏರಿ, ಬಾಗಿಲು ಮುರಿದು ಆಕೆ ಇದ್ದ ಬೆಡ್ರೂಮ್ಗೆ ನುಗ್ಗಿ ಬೆಂಕಿ ಹಚ್ಚಿದ್ದಾನೆ.
ಮನೆಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಮನೆಯವರು ಸ್ಥಳಿಯರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಿಯರು ಮನೆ ಮುಂದೆ ಜಮಾಯಿಸಿದ್ದಾರೆ. ಇದರಿಂದ ಗಾಬರಿಗೊಂಡ ರತ್ನೇಶ್ ಕೆಳಗೆ ಇಳಿದ್ದಿದ್ದಾನೆ. ನಂತರ ಅಲ್ಲೇ ಇದ್ದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇದರಿಂದ ಇಡೀ ದೇಹಕ್ಕೆ ಬೆಂಕಿ ವ್ಯಾಪಿಸಿ ಮನೆ ಗೇಟ್ ಬಳಿ ಕುಸಿದು ಮೃತಪಟ್ಟಿದ್ದಾನೆ.
ಇನ್ನೂ ಈ ಘಟನೆಯಲ್ಲಿ ಮಹಿಳೆ, ಆಕೆಯ ಸಹೋದರ ಹಾಗು ಅತ್ತಿಗೆಗೆ ಸುಟ್ಟ ಗಾಯಗಳಾಗಿವೆ. ಇವರನ್ನು ವಡಕಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.