Crime: ಐಟಿ ಕಂಪನಿಯಲ್ಲಿ ಕೆಲಸಕೊಡಿಸುವುದಾಗಿ ಉದ್ಯಮಿಗೆ 3.50 ಕೋಟಿ ವಂಚನೆ

1 min read
Hubli Town Police Station Saaksha Tv

ಐಟಿ ಕಂಪನಿಯಲ್ಲಿ ಕೆಲಸಕೊಡಿಸುವುದಾಗಿ ಉದ್ಯಮಿಗೆ 3.50 ಕೋಟಿ ವಂಚನೆ

ಹುಬ್ಬಳ್ಳಿ: ಐಟಿ ಕಂಪನಿಯಲ್ಲಿ ಕೆಲಸಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ 3.50 ಕೋಟಿ ಹಣ ಪಡೆದು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸಿಬಿಟಿ ಕಿಲ್ಲಾದ ವಿನೋದ ರಾಥೋಡ್ ವಂಚನೆಗೆ ಒಳಗಾದ ಉದ್ಯಮಿ. ಅಮಿತ್ ಪ್ರಭು, ಅಂಕಿತಾ ಕಾಮತ್‌, ಬೆಂಗಳೂರಿನ ದೀಪಕ್​ ಸುಂದರರಾಜನ್‌ ಮತ್ತು ಹೈದರಾಬಾದ್‌ನ ಶ್ರವಣಕುಮಾರ ವಂಚಿಸಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನೋದ ರಾಥೋಡ್‌, ಅಮಿತ್‌ ಪ್ರಭು ಹಾಗೂ ಅಂಕಿತಾ ಕಾಮತ್‌ 2019ರಲ್ಲಿ ಸೆಟ್‌ಲೈಟ್ ಬಿಲ್ಡಿಂಗ್‌ನಲ್ಲಿ ಬಿಎಲ್‌ಹೆಚ್ ಹೈಟೆಕ್ ಪ್ರೈ.ಲಿ. ಆರಂಭಿಸಿದ್ದರು. ಸಿಂಗಾಪುರದಲ್ಲಿ ಪ್ರಾಜೆಕ್ಟ್ ಇದ್ದು, ಅದನ್ನು ಪಡೆಯಲು ಹಣ ಬೇಕಾಗುತ್ತದೆ ಎಂದು ವಿನೋದ್ ಅವರಿಂದ ಅಮಿತ್‌ ಹಾಗೂ ಅಂಕಿತಾ 15 ಲಕ್ಷ ರೂ ಪಡೆದುಕೊಂಡಿದ್ದರು. ಹೀಗೆ ಬೇರೆ-ಬೇರೆ ಪ್ರಾಜೆಕ್ಟ್ ಹೆಸರಿನಲ್ಲಿ 3.50 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

ವರ್ಷವಾದರೂ ಪ್ರಾಜೆಕ್ಟ್‌ ನೀಡದಿದ್ದರಿಂದ ಹಣ ಮರಳಿಸುವಂತೆ ಕೇಳಿದ ವಿನೋದ ಅವರಿಗೆ ದೀಪಕ್​ ಎಂಬಾತ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd