ಕೋಲಾರ: ತನ್ನ ಪತ್ನಿಯನ್ನು ಚುಡಾಯಿಸಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಯೊಬ್ಬ ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಕೋಲಾರದ (Kolara) ಜಮಾಲ್ ಷಾ ನಗರದಲ್ಲಿ ನಡೆದಿದೆ. ರೋಹಿದ್ ಅಲಿಯಾಸ್ ಅರ್ಬಾಜ್ (25) ಕೊಲೆಯಾದ ವ್ಯಕ್ತಿ. ಅಂಬ್ಜದ್ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಅಂಬ್ಜದ್ ಪತ್ನಿಯ ಮೇಲೆ ಅರ್ಬಾಜ್ ಕಣ್ಣು ಹಾಕಿದ್ದ. ಈ ಮೊದಲು ಎರಡು ಮೂರು ಬಾರಿ ಇದೇ ವಿಚಾರವಾಗಿ ಗಲಾಟೆ ನಡೆದಿತ್ತು. ಶುಕ್ರವಾರ ಕೂಡ ಗಲಾಟೆ ನಡೆದಿದೆ.
ಈ ಸಂದರ್ಭದಲ್ಲಿ ಅಂಬ್ಜದ್ ಚಾಕುವಿನಿಂದ ಅರ್ಬಾಜ್‌ನ ಎದೆಗೆ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆರೋಪಿ ಅಂಬ್ಜದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.








