ಮುಂಬೈ: ಮಹಿಳೆಯೊಬ್ಬರು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ವ್ಯಕ್ತಿಯ ಮೇಲೆ ಅತ್ಯಾಚಾರ ಆರೋಪ ಮಾಡಿರುವ ಘಟನೆ ನಡೆದಿದೆ.
ಸದ್ಯ ಆರೋಪಿ ಲಿವ್-ಇನ್ ರಿಲೇಷನ್ ಶಿಪ್ ಒಪ್ಪಂದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮುಂಬೈನಲ್ಲಿ 46 ವರ್ಷದ ವ್ಯಕ್ತಿಯ ವಿರುದ್ಧ 29ರ ಆತನ ಸಂಗಾತಿ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದಳು. ಪ್ರಕರಣದಲ್ಲಿ ಬಂಧನದಿಂದ ಪಾರಾಗಲು ಆರೋಪಿ, ತಮ್ಮಿಬ್ಬರ ನಡುವಿನ ಲಿವ್-ಇನ್ ಸಂಬಂಧದ ಒಪ್ಪಂದ ಪತ್ರವನ್ನು ಕೋರ್ಟ್ಗೆ ಸಲ್ಲಿಸಿದ್ದಾನೆ ಎನ್ನಲಾಗಿದೆ.
ಸದ್ಯ ಇದನ್ನು ಪರಿಗಣಿಸಿದ ಕೋರ್ಟ್ ಆತನಿಗೆ ಜಾಮೀನು ನೀಡಿದೆ. ಆದರೆ ಮಹಿಳೆ ಮಾತ್ರ ಅದರಲ್ಲಿದ್ದ ಸಹಿ ನನ್ನದಲ್ಲ ಎಂದು ಕೋರ್ಟ್ ಗೆ ಹೇಳಿದ್ದಾಳೆ. ಮಹಿಳೆಯು ವಯಸ್ಸಾದವರ ಆರೈಕೆ ಮಾಡುವವರಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸರ್ಕಾರಿ ನೌಕರಸ್ಥನು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಿವ್-ಇನ್ ಸಂಬಂಧದ ಒಪ್ಪಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನನ್ನ ಸಂಗಾತಿ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಒಟ್ಟಿಗೆ ವಾಸಿಸುತ್ತಿದ್ದ ಸಮಯದಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ, ಆರೋಪಿ ಪರ ವಾದಿಸಿದ್ದ ವಕೀಲರು ಇದನ್ನು ವಂಚನೆ ಎಂದಿದ್ದಾರೆ.