ನವದೆಹಲಿ: ಟಿಂಡರ್ ಆಪ್ ನಲ್ಲಿ ಗೆಳತಿಯನ್ನು ಹುಡುಕಿ ಹೋಗಿ ವ್ಯಕ್ತಿಯೊಬ್ಬಾತ ಹೆಣವಾಗಿರುವ ಘಟನೆ ನಡೆದಿದೆ.
ಪ್ರಿಯಾ ಸೇಠ್ ಎಂಬ ಮಹಿಳೆಯನ್ನು ದುಶ್ಯಂತ್ ಶರ್ಮಾ (Dushyant Sharma) ಟಿಂಡರ್ನಲ್ಲಿ (Tinder) ಪರಿಚಯ ಮಾಡಿಕೊಂಡಿದ್ದ. 3 ತಿಂಗಳ ಕಾಲ ಆ್ಯಪ್ನಲ್ಲಿ ಮಾತನಾಡಿದ ನಂತರ, ಭೇಟಿಯಾಗಲು ನಿರ್ಧರಿಸಿದರು. ಮಹಿಳೆ ಬಾಡಿಗೆ ಮನೆಗೆ ಬರಲು ಹೇಳಿದ್ದಾರೆ. ಆತ ಹೋಗಿ ಹೆಣವಾಗಿದ್ದಾನೆ ಎನ್ನಲಾಗಿದೆ.
ಇಬ್ಬರೂ ಆಪ್ ಮೂಲಕ ಪರಿಚಯವಾಗಿದ್ದರು ಎನ್ನಲಾಗಿದ್ದು, ಇಬ್ಬರು ಸುಳ್ಳಿನ ಮೇಲೆ ಸುಳ್ಳು ಹೇಳಿಕೊಂಡು ಪರಿಚಯವಾಗಿದ್ದಾರೆ. ವಿವಾಹಿತ ದುಶ್ಯಂತ್ ದೆಹಲಿಯ (Delhi) ಶ್ರೀಮಂತ ಉದ್ಯಮಿ ಎಂದು ಹೇಳಿದ್ದಾನೆ. ಇನ್ನೊಂದೆಡೆ ಪ್ರಿಯಾ, ದುಶ್ಯಂತ್ನನ್ನು ಅಪಹರಿಸಿ ಹಣ ವಸೂಲಿ ಮಾಡುವ ಉದ್ದೇಶದಿಂದ ಪರಿಚಯ ಮುಂದುವರೆಸಿದ್ದಾಳೆ.
ದುಶ್ಯಂತ್ ಮನೆಗೆ ಕಾಲಿಟ್ಟಾಗ ಸಹಚರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಎಂಬುವವರ ಸಹಾಯದಿಂದ ಪ್ರಿಯಕರನನ್ನು ಅಪಹರಿಸಿದ್ದಾರೆ. ಆನಂತರ ಬೇಡಿಕೆ ಇಟ್ಟಾಗ ಆತನ ಕುಟುಂಬವರು 10 ಲಕ್ಷ ರೂ. ನೀಡಲು ವಿಫಲವಾಗಿದ್ದಾರೆ. ಆಗ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದುಶ್ಯಂತ್ ಶರ್ಮಾ ಮೃತ ದೇಹವು ಮೇ 4, 2018 ರಂದು ಜೈಪುರದ ಹೊರಗೆ ಪತ್ತೆಯಾಗಿತ್ತು. ತನಿಖೆ ಕೈಗೊಂಡಾಗ ಆರೋಪಿತಳು ತನ್ನ ಅಪರಾಧ ಒಪ್ಪಿಕೊಂಡಿದ್ದಾಳೆ. ಈಗ ದುಶ್ಯಂತ್ ಶರ್ಮಾ ಹತ್ಯೆಯ ಮೂವರು ಆರೋಪಿಗಳಿಗೆ ಜೈಪುರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.