Crime: ರಾಮನ ಪೂಜೆ ಮಾಡುತ್ತಾ ರಾಮನ ಪಾದ ಸೇರಿದ ಅಕ್ಕ-ತಂಗಿಯರು

1 min read
Accident Saaksha Tv

ರಾಮನ ಪೂಜೆ ಮಾಡುತ್ತಾ ರಾಮನ ಪಾದ ಸೇರಿದ ಅಕ್ಕ-ತಂಗಿಯರು

ತೆಲಂಗಾಣ: ಶ್ರೀ ರಾಮನವಮಿ ಹಿನ್ನಲೇ ಭಕ್ತರಿಂದ ತುಂಬಿದ ದೇವಸ್ಥಾನಕ್ಕೆ, ಬೊಲೆರೋ ವಾಹನವೊಂದು ದೇವಸ್ಥಾನದಳೊಗೆ ನುಗ್ಗಿದ ಪರಿಣಾಮ ಮಕ್ಕಳ್ಳಿಬ್ಬರು ಸಾವನ್ನಪ್ಪಿರುವ ಘಟನೆ ಕೊಣಿಜರ್ಲ ತಾಲೂಕಿನ ಪಲ್ಲಿಪಾಡು ಗ್ರಾಮದಲ್ಲಿ ನಡೆದಿದೆ.

 ದೇದಿಪ್ಯಾ (9) ಮತ್ತು ಸಹಾಸ್ರ (7) ಮೃತ ದುರ್ದೈವಿಗಳು. ಇನ್ನೂ ಬೊಲೆರೋ ವಾಹನದಲ್ಲಿದ್ದ ರೈತ ನಾಗಾಟಿ ವೆಂಕಣ್ಣ, ಡ್ರೈವರ್​ ಪೋತುರಾಜುಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಮಕ್ಕಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಡೆದಿದ್ದೇನು ?:  ಶ್ರೀರಾಮ ನವಮಿ ಅಂಗವಾಗಿ ಪಲ್ಲಿಪಾಡು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಸೀತಾರಾಮ ಕಲ್ಯಾಣ ಜರುಗಿತು. ಸಂಜೆ ವೇಳೆ ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರೆಲ್ಲರೂ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೆಲ ಮಕ್ಕಳು ದೇವಾಲಯದ ಮುಂದೆ ಆಟವಾಡುತ್ತಿದ್ದರು.

Telangana Saaksha Tv

ಇದೇ ಸಮಯದಲ್ಲಿ ಖಮ್ಮಂನಿಂದ ದುದ್ದೇಪೂಡಿ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಅತೀವೇಗದಿಂದ ದೇವಾಲಯದ ಮುಂದೆ ಇದ್ದ ಲೈಟ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ, ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದು ದೇವಾಲಯಕ್ಕೂ ನುಗ್ಗಿದೆ. ಪರಿಣಾಮ ಅಕ್ಕ-ತಂಗಿಯರಾದ  ದೇದಿಪ್ಯಾ ಮತ್ತು ಸಹಾಸ್ರ ಎಂಬುವರು ಸೇರಿದಂತೆ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ವೆಂಕಣ್ಣ, ದೇದಿಪ್ಯಾ ಮತ್ತು ಸಹಾಸ್ರಳನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಮಾರ್ಗ ಮಧ್ಯೆದಲ್ಲಿ ಅಕ್ಕ-ತಂಗಿಯರಿಬ್ಬರು ಕಣ್ಣುಮುಚ್ಚಿದ್ದರು.  ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd