ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಅಪ್ರಾಪ್ತ ಬಾಲಕಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಹಠ ಮಾಡುತ್ತಾಳೆ ಬುದ್ದಿ ಹೇಳಿ ಎಂದು ಪಾಲಕರು ಪಕ್ಕದ ಮನೆಗೆ ಕಳುಹಿಸಿದ್ದಾರೆ. ಆಗ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 7 ವರ್ಷದ ಆಕೃತಿ ಸಾವನ್ನಪ್ಪಿದ್ದಾಳೆ. ವಿನೋದ್ ಹಾಗೂ ನಳಿನ ದಂಪತಿಗಳ ಪುತ್ರಿಯೇ ಸಾವನ್ನಪ್ಪಿದ ಬಾಲಕಿ. ಪಕ್ಕದ ಮನೆಯ ನಂಜುಂಡಪ್ಪ ಎಂಬುವವರು ಅವರ ಪೋಷಕರಿಗೆ ತಿಳಿಯದಂತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದ್ದು, ಇದು ಹಲವಾರು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಮಗು ವಾಂತಿ ಮಾಡುತ್ತಿದೆ ಎಂದು ನಂಜುಂಡಪ್ಪ ಆಸ್ಪತ್ರೆಗೆ ಕರಕೊಂಡು ಹೋಗಿದ್ದಾರೆ. ಆದ್ರೆ, ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದಕ್ಕೂ ಮೊದಲು ಎರಡು ಬಾಲಕಿ ಪೋಷಕರಿಗೆ ಎರಡು ಬಾರಿ ಫೋನ್ ಮಾಡಿದ್ದಾರೆ. ನಿದ್ರೆಯಲ್ಲಿದ್ದ ಬಾಲಕಿ ಪೋಷಕರು ಮನೆ ಬಾಗಿಲು ತೆಗೆದಿಲ್ಲ ಎನ್ನಲಾಗಿದೆ.
ಪರಿಶೀಲನೆ ನಡೆಸಿದ ವೇಳೆ ಬಾಲಕಿಯ ಮೈಕೈ ಬಳಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಇರುವುದು ಕಂಡು ಬಂದಿದೆ. ಬಾಲಕಿ ಉಸಿರುಗಟ್ಟಿ ಸತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪಾಲಕರು, ಪಕ್ಕದ ಮನೆಯವರ ವಿರುದ್ಧ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.