ರಾಯಚೂರು: ಚಾಕೊಲೇಟ್ (Chocolate) ಆಸೆ ತೋರಿಸಿ 11 ವರ್ಷದ ಅಪ್ರಾಪ್ತ (Minor) ಬಾಲಕಿಯ ಮೇಲೆ ಪಾಪಿಯೊಬ್ಬ ಅತ್ಯಾಚಾರ (Rape) ನಡೆಸಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಆರ್‌ಹೆಚ್ ಕ್ಯಾಂಪ್ ನಲ್ಲಿ ವರದಿಯಾಗಿದೆ.
ಸಪನ್ ಮಂಡಲ್ (52) ಅತ್ಯಾಚಾರ ಕೃತ್ಯ ಎಸಗಿರುವ ಪಾಪಿ. ಬಾಲಕಿಯ ಮನೆಯ ಪಕ್ಕದಲ್ಲಿಯೇ ಈತ ವಾಸಿಸುತ್ತಿದ್ದು, ಚಾಕೊಲೇಟ್ ಕೊಡಿಸುವುದಾಗಿ ಬಾಲಕಿ ಕರೆದೊಯ್ದಿದ್ದ. ನಂತರ ಸ್ಕೂಟರ್ ಕಲಿಸುವುದಾಗಿ ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಜಮೀನಿನಲ್ಲಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿ ಕಣ್ಣೀರು ಹಾಕುತ್ತಾ ಮನೆಗೆ ಬಂದ ವೇಳೆ ವಿಷಯ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.








