ಮೈಸೂರು: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನೊಬ್ಬ ಮತ್ತೊಬ್ಬ ಅಪ್ರಾಪ್ತನಿಗೆ ಚಾಕು ಹಾಕಿರುವ ಭಯಾನಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತರ ಗಲಾಟೆ ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಮೈಸೂರಿನ (Mysuru) ಸುನ್ನಿಚೌಕ್ ಬಳಿ ನಡೆದಿದೆ. ಫರ್ವೇಜ್ ಖಾನ್ (17) ಕೊಲೆಯಾದ ಯುವಕ. 15 ವರ್ಷದ ಬಾಲಕ (Boy) ಕ್ಷುಲ್ಲಕ ಕಾರಣಕ್ಕೆ ಚಾಕು ಹಾಕಿ ಕೊಲೆ ಮಾಡಿದ್ದಾನೆ. ಆಟವಾಡುತ್ತಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಫರ್ವೇಜ್ ಖಾನ್‌ಗೆ ಬಾಲಕ ಚಾಕುವಿನಿಂದ ಇರಿದಿದ್ದಾನೆ
ಚಾಕು ಇರಿತಕ್ಕೊಳಗಾದ ಫರ್ವೇಜ್ ಖಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಮಂಡಿ ಪೊಲೀಸರು (Mandi Police) ಇದೀಗ ವಶಕ್ಕೆ ಪಡೆದಿದ್ದಾರೆ








