ಜನನಿಬಿಡ ರಸ್ತೆಯಲ್ಲಿಯೇ ಅಪ್ರಾಪ್ತನೊಬ್ಬ ಕತ್ತಿಯಿಂದ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈನ ಶಿವಾಜಿನಗರ ಪ್ರದೇಶದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಾಳಿಗೊಳಗಾದ ವ್ಯಕ್ತಿ ರಕ್ತದ ಮೊಡವಿನಲ್ಲಿ ಬಿದ್ದರೂ ಅಪ್ರಾಪ್ತ ಬಾಲಕ ಮಾತ್ರ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ತುಂಬಾ ಜನರು ಅಲ್ಲಿ ನಿಂತು ಘಟನೆಯನ್ನು ನೋಡಿ ವಿಡಿಯೋ ಮಾಡುತ್ತಿದ್ದರು ಯಾರೂ ಉಳಿಸುವ ಕೆಲಸ ಮಾಡಿಲ್ಲ.
ಮೃತರನ್ನು ಅಹ್ಮದ್ ಪಠಾಣ್ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈ ಘಟನೆ ಕಂಡು ಇಡೀ ಮುಂಬಯಿ ನಗರ ಬೆಚ್ಚಿ ಬಿದ್ದಿದೆ.