ಹೈದರಾಬಾದ್: ಅಪ್ರಾಪ್ತ ಬಾಲಕಿಯೊಬ್ಬಳು ಪ್ರಿ ಬಸ್ ನಲ್ಲಿ ಬರೋಬ್ಬರಿ 33 ಗಂಟೆ ಸಂಚರಿಸಿದ್ದು, ಸದ್ಯ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.
ಹಾಸ್ಟೆಲ್‌ಗೆ (Hostel) ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಈ ಬಾಲಕಿ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ. 12 ವರ್ಷದ ಬಾಲಕಿ ಉಚಿತ ಬಸ್ ಸೇವೆ ಬಳಸಿಕೊಂಡು ಸಂಚರಿಸಿದ್ದಾಳೆ. ಪಾಲಕರು ಕಾಣೆಯಾಗಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಹೈದರಾಬಾದ್ ನ (Hyderabad) ಜ್ಯೂಬಿಲಿ ಬಸ್ ನಿಲ್ದಾಣದಲ್ಲಿ ಬಾಲಕಿ ಸಿಕ್ಕಿ ಬಿದ್ದಿದ್ದಾಳೆ.
ಬಾಲಕಿ ಖಾಸಗಿ ಶಾಲೆಯ ಹಾಸ್ಟೆಲ್ ನಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಕ್ರಿಸ್ಮಸ್ ರಜೆಗಾಗಿ ಪೆದ್ದಪಳ್ಳಿಯಲ್ಲಿನ ತಾತನ ಮನೆಗೆ ತೆರಳಿದ್ದಳು. ರಜೆ ಮುಗಿದ ನಂತರ ತಾತನ ಮನೆಯಿಂದ ಹೊರಟ ಬಾಲಕಿ ಹಾಸ್ಟೆಲ್‌ಗೆ ಹೋಗಲು ಇಷ್ಟ ಇಲ್ಲದ ಕಾರಣ ಬಸ್ ಬದಲಾಯಿಸುತ್ತಾ ಸುಮಾರು ಸುಮಾರು 33 ಗಂಟೆ ಪ್ರಯಾಣ ಮಾಡಿದ್ದಾಳೆ. ಬಸ್ ಹತ್ತಿಸಿದ ನಂತರ ಬಾಲಕಿ ಊರು ತಲುಪಿಲ್ಲ, ಹಾಸ್ಟೆಲ್ ಗೂ ಬಂದಿಲ್ಲ ಎಂದು ಆತಂಕಗೊಂಡು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.