ಕೆ.ಆರ್.ಪೇಟೆ : ಲಾಕ್ ಡೌನ್ ಹಿನ್ನೆಲೆ ಮದ್ಯ ಸಿಗದೆ ಕಂಗಾಲಾಗಿದ್ದ ತಾಯಿಯೊಬ್ಬಳು ಎಣ್ಣೆ ಸಿಗುತ್ತಿದ್ದಂತೆ ಫುಲ್ ಟೈಟಾಗಿ ಕುಡಿದ ಅಮಲಿನಲ್ಲಿ ಹೆತ್ತ ಮಗನನ್ನೆ ಹೊಡೆದು ತುಟಿ ಕಚ್ಚಿ ತುಂಡರಿಸಿರುವ ಘಟನೆ ಕೆ.ಆರ್ ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಾರ್ವತಿ ಎಂಬುವವರು ಕುಡಿದ ಮತ್ತಿನಲ್ಲಿ ತನ್ನ ಮಗ ಮೋಹನ್ (28) ಎಂಬುವವನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆಗೊಳಗಾಗಿರುವ ಯುವಕನ ಪತ್ನಿ ಜಗಳ ಬಿಡಿಸಲು ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಪಾರ್ವತಿ ಮಗನ ತುಟಿಯನ್ನು ಕಚ್ಚಿ ಬಲವಾಗಿ ಎಳೆದು ತುಂಡರಿಸಿದ್ದಾಳೆ.
ಇದರಿಂದ ಮೋಹನ್ ನ ತುಟಿ ಭಾಗವೇ ತುಂಡರಿಸಿ ಹೋಗಿದೆ. ಕೂಡಲೇ ಅಕ್ಕ ಪಕ್ಕದ ಜನರು ಯುವಕನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.