ತೆಲಂಗಾಣ: ಹಸುಗೂಸಿಗೆ ಇಲಿ ಕಚ್ಚಿದ ಪರಿಣಾಮ 40 ದಿನದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಮೂಗಿಗೆ ಇಲಿ ಕಚ್ಚಿದ ಪರಿಣಾಮ ರಕ್ತಸ್ರಾವ ಹೆಚ್ಚಾಗಿದೆ. ಕೂಡಲೇ ಹೈದರಾಬಾದ್ ನ ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ನಾಗನೂಲು ಗ್ರಾಮದ ಲಕ್ಷ್ಮೀಕಲಾ ಹಾಗೂ ಶಿವ ಎಂಬುವವರ ಮಗುವೇ ಸಾವನ್ನಪ್ಪಿದ ದುರ್ದೈವಿ. ಈ ದಂಪತಿ 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ 40 ದಿನಗಳ ಹಿಂದೆಯಷ್ಟೇ ಮಗು ಹುಟ್ಟಿತ್ತು. ಸದ್ಯ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.