ಅಹಮದಾಬಾದ್: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದೆ. ಈ ವೇಳೆ ದೊಡ್ಡ ಭದ್ರತಾ ಲೋಪವಾಗಿದ್ದು ಪ್ಯಾಲೆಸ್ತೀನ್ ಬೆಂಬಲಿಗನೊಬ್ಬ (Palestine Supporters) ಕ್ರೀಡಾಂಗಣಕ್ಕೆ ನುಗ್ಗಿದ್ದು, ಆತನನ್ನು ನಂತರ ಬಂಧಿಸಲಾಗಿದೆ.
14ನೇ ಓವರ್‌ನಲ್ಲಿ ಮೈದಾನದ ಒಳಗಡೆ ಪ್ಯಾಲೆಸ್ತೀನ್ ಬೆಂಬಲಿಗ ನುಗ್ಗಿದ್ದಾನೆ. ನೇರವಾಗಿ ಕೊಹ್ಲಿ (Virat Kohli) ಬಳಿ ಹೋಗಿ ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಪ್ಯಾಲೆಸ್ತೀನ್ ಮಾಸ್ಕ್ ಧರಿಸಿದ್ದ ಆತನ ಟೀಶರ್ಟ್‌ನಲ್ಲಿ ʼStop Bombing Palestine’ ಎಂಬ ಬರಹ ಇತ್ತು. ಸಿಬ್ಬಂದಿ ಕೂಡಲೇ ಮೈದಾನಕ್ಕೆ ತೆರಳಿ ಆತನನ್ನು ಬಂಧಿಸಿದ್ದಾರೆ.
ಈ ವ್ಯಕ್ತಿಯ ಹೆಸರು ಜಾನ್ ಎನ್ನಲಾಗಿದ್ದು, ಆಸ್ಟ್ರೇಲಿಯಾದಿಂದ ಬಂದಿದ್ದ. ಜಾನ್ ಪಿಚ್ ಪರೀಕ್ಷೆ ಮಾಡಲು ನಿಯೋಜನೆಗೊಂಡಿದ್ದ ವ್ಯಕ್ತಿ ಎಂದು ಈಗ ವರದಿಯಾಗಿದೆ. ಪೊಲೀಸರು ಆತನನ್ನು ಬಂಧಿಸಿ ಸದ್ಯ ವಿಚಾರಣೆಗೆ ಒಳಪಡಿಸಿದ್ದಾರೆ.