ಬಸ್ ಗೆ ಆಕಸ್ಮಿಕ ಬೆಂಕಿ ಮಹಿಳೆ ಸಜೀವ ದಹನ
ಗುಜರಾತಿನ ಸೂರತ್ ನಗರದಲ್ಲಿ ಮಂಗಳವಾರ ರಾತ್ರಿ ಖಾಸಗಿ ಐಷಾರಾಮಿ ಬಸ್ಸಿನಲ್ಲಿದ್ದ ಮಹಿಳೆಯೊಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಮಹಿಳೆ ಕಿಟಕಿಯ ಹೊರಗೆ ಕೈ ಚಾಚಿ ಸಹಾಯಕ್ಕಾಗಿ ಮನವಿ ಮಾಡಿದ್ದಾಳೆ. ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದು, ಅವರನ್ನು ಸೂರತ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸೂರತ್ನ ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ ಬಸಂತ್ ಪಾರಿಕ್ ಹೇಳಿದ್ದಾರೆ. ವೈರಿಂಗ್ ಸುಟ್ಟಿದ್ದರಿಂದ ಬಿಸಿ ಹೆಚ್ಚಾಗಿದ್ದು ಎಸಿ ಕಂಪ್ರೆಸರ್ ಸ್ಫೋಟಗೊಂಡು ಬೆಂಕಿ ಅತ್ಯಂತ ವೇಗವಾಗಿ ವ್ಯಾಪಿಸಿ 58 ಸೆಕೆಂಡುಗಳಲ್ಲಿ ಸುಟ್ಟು ಬೂದಿಯಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಬಸ್ ಕಟರ್ಗಾಮ್ ಪ್ರದೇಶದಿಂದ ಭಾವನಗರಕ್ಕೆ ಪ್ರಯಾಣ ಆರಂಭಿಸಿದಾಗ ಅದರಲ್ಲಿ ಕೆಲವೇ ಪ್ರಯಾಣಿಕರಿದ್ದರು. ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಲು ಬಸ್ ರಾತ್ರಿ 9.30 ರ ಸುಮಾರಿಗೆ ಹೀರಾಬಾಗ್ ವೃತ್ತವನ್ನು ತಲುಪಿದಾಗ, ಹಠಾತ್ ಸ್ಫೋಟದ ನಂತರ ಬಸ್ನ ಹಿಂಬದಿ ಬೆಂಕಿ ಹೊತ್ತಿಕೊಂಡಿತು ಎಂದು ಸ್ಥಳಿಯರು ತಿಳಿಸಿದ್ದಾರೆ.
ಹಿಂದಿನಿಂದ ಬಂದ ಇನ್ನೊಂದು ಬಸ್ಸಿನ ಚಾಲಕ ಈ ಬಸ್ಸಿನ ಚಾಲಕನಿಗೆ ಮಾಹಿತಿ ನೀಡಿದ್ದ. ಚಾಲಕ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಬಸ್ ನಿಂದ ಕೆಳಗಿಳಿಸಿದ್ದಾರೆ. ಆದರೆ 2-3 ನಿಮಿಷದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದೆ.
A private bus caught fire in Hirabag area of Surat, Gujarat. Most of the passengers managed to escape on time, except a woman. She died in the fire. pic.twitter.com/RhSSMzlnIk
— Treeni (@_treeni) January 19, 2022