ಲಾಸ್ ಅಮೇರಿಕಾಸ್ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ಪತನ 10 ಮಂದಿ ಸಾವು
ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿರುವ ಲಾಸ್ ಅಮೆರಿಕಸ್ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡಿದ್ದು, ಪೋರ್ಟೊ ರಿಕನ್ ಸಂಗೀತ ನಿರ್ಮಾಪಕ “ಫ್ಲೋ ಲಾ ಮೂವಿ” ಸೇರಿದಂತೆ ಒಂಬತ್ತು ಜನರು ಬುಧವಾರ ಸಾವನ್ನಪ್ಪಿದ್ದಾರೆ ಎಂದು ವಿಮಾನದ ಮಾಲೀಕ ಹೆಲಿಡೋಸಾ ಹೇಳಿದ್ದಾರೆ.
“ಲಾಸ್ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ನಮ್ಮ ವಿಮಾನ ದುರಂತ ಅಪಘಾತಕ್ಕೆ ಈಡಾಗಿದ್ದು ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೆವೇ … ದುರಂತದಲ್ಲಿ ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರು ಸಾವನ್ನಪ್ಪಿದ್ದಾರೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಖಾಸಗಿ ವಿಮಾನದಲ್ಲಿ ಅಮೆರಿಕದ ಆರು ಪ್ರಯಾಣಿಸಕರು, ಇಬ್ಬರು ಸಿಬ್ಬಂದಿಗಳು, ಇಬ್ಬರು ಪೈಲಟ್‌ಗಳುಗಳಿದ್ದರು ಎಂದು ಏರಪೋರ್ಟ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಡೊಮಿನಿಕನ್ ರಿಪಬ್ಲಿಕ್ ರಾಜಧಾನಿಯ ಸಮೀಪವಿರುವ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ಯುಎಸ್ ರಾಜ್ಯ ಫ್ಲೋರಿಡದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.