ಕೋಲಾರ: ಕದ್ದ ಕೋಳಿಗಳನ್ನು ಖರೀದಿಸುತ್ತಿದ್ದದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ರೌಡಿಶೀಟರ್ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ನಗರದ ಅಮ್ಮವಾರಪೇಟೆ ವೃತ್ತದಲ್ಲಿ ನಡೆದಿದೆ. ತಾಜ್ಫೀರ್ ಎಂಬ ರೌಡಿಶೀಟರ್ ಹಲ್ಲೆ ಯತ್ನಿಸಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜ್ಫೀರ್ ಕೋಳಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದು, ಕಾದರಿಪುರದಲ್ಲಿ ಕಳ್ಳತನ ಮಾಡಿ ತರುತ್ತಿದ್ದ ಕೋಳಿಗಳನ್ನು ಖರೀದಿಸುತ್ತಿದ್ದ ಎನ್ನಲಾಗಿದೆ. ಇಲ್ಲಿ ಕಳ್ಳತನದ ಕೋಳಿಗಳನ್ನು ಖರೀದಿಸುತ್ತಿರುವುದು ಈತನೊಬ್ಬನೇ ಎಂದು ಯುವಕ ಆರೋಪಿಸಿದ್ದಾರೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.








