ಸ್ನೇಹಿತನನ್ನೇ ಗುಂಡಿಕ್ಕಿ ಕೊಂದ ಶಾಲಾ ವಿದ್ಯಾರ್ಥಿ
ನವದೆಹಲಿ: ಶಾಲೆಯ ಮಕ್ಕಳು ಜಗಳವಾಡಿಕೊಂಡು, ಸ್ನೇಹಿತನೇ ಸನ್ನೇಹಿತನಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.
ವಿದ್ಯಾರ್ಥಿ ಖುರ್ಷಿದ್ ಮೃತ ದುರ್ದೈವಿ. ಘಟನೆ ಬಳಿಕ ಹುಡುಗನ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅಕ್ಷಯ್ ಪಬ್ಲಿಕ್ ಸ್ಕೂಲ್‍ನ ಕೆಲವು ಹುಡುಗರ ನಡುವೆ ಜಗಳ ನಡೆದಿದೆ. ಈ ವೇಳೆ ಹುಡುಗನೊಬ್ಬನಿಗೆ ತನ್ನ ಸ್ನೇಹಿತನೇ ಗುಂಡು ಹಾರಿಸಿದ್ದಾನೆ.
ನಂತರ ಗುಂಡಿನ ಸದ್ದು ಕೇಳಿದ ಅಕ್ಕಪಕ್ಕದ ನಿವಾಸಿಗಳು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹುಡುಗನನ್ನು ತಕ್ಷಣವೇ ತಾರಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹುಡುಗ ಕೊನೆಯುಸಿರೆಳೆದಿದ್ದಾನೆ.
ಹೀಗಾಗಿ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರಿಗೆ ಪ್ರಕರಣದ ಪ್ರಮುಖ ಆರೋಪಿ ಸಾಹಿಲ್ ಎಂದು ತಿಳಿದುಬಂದಿದ್ದು, ಆತನನ್ನು ಬಂಧಿಸಿ, ಆತನ ಬಳಿ ಇದ್ದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.