ಮುಂಬೈ ಬಾರ್ ನಲ್ಲಿ ರಹಸ್ಯ ನೆಲಮಾಳಿಗೆ 17 ಮಹಿಳೆಯರ ರಕ್ಷಣೆ…..
ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಪ್ರಸಿದ್ಧ ದೀಪಾ ಬಾರ್ನಲ್ಲಿ ರಹಸ್ಯ ನೆಲಮಾಳಿಗೆಯನ್ನು ಕಂಡುಹಿಡಿಯಲಾಗಿದೆ. ಈ ನೆಲಮಾಳಿಗೆಯೊಳಗೆ ಕೂಡಿ ಹಾಕಲಾಗಿದ 17ಬಾಲಕಿಯರನ್ನ ರಕ್ಷಣೆ ಮಾಡಲಾಗಿದೆ.
15 ಗಂಟೆಗಳ ಕಾಲ ಕಾರ್ಯಾಚರಣೆಯ ನಂತರ, ಮುಂಬೈ ಪೊಲೀಸ್ ಮತ್ತು NGO ತಂಡವೊಂದು ಈ ರಹಸ್ಯ ನೆಲಮಾಳಿಗೆಯ ರಹಸ್ಯವನ್ನು ಬಹಿರಂಗಪಡಿಸಿದೆ.
ಈ ನೆಲಮಾಳಿಗೆಯೊಳಗೆ ಹೋಗುವ ದಾರಿಯು ಮೇಕಪ್ ರೂಮಿನ ಗೋಡೆಯಲ್ಲಿರುವ ಕನ್ನಡಿಯ ಹಿಂದಿನಿಂದ ಹೋಗುತ್ತಿತ್ತು. ಇದು ಸ್ವಯಂಚಾಲಿತ ವಿದ್ಯುತ್ ಬಾಗಿಲುಗಳನ್ನು ಹೊಂದಿದ್ದು, ರೂಮನಲ್ಲಿ ಎಸಿ ಮತ್ತು ಹಾಸಿಗೆ ವ್ಯವಸ್ಥೆ ಸಹ ಹೊಂದಿತ್ತು. ಮುಂಬೈನ ಎನ್ಜಿಒ ಕವಚ್ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಾಜ ಸೇವಾ ಶಾಖೆಯ ಡಿಸಿಪಿ ರಾಜು ಭುಜಬಲ್ ತಿಳಿಸಿದ್ದಾರೆ.
ಭಾನುವಾರ ಸಂಜೆಯಿಂದ ಆರಂಭವಾದ ಈ ದಾಳಿ ರಾತ್ರಿಯಿಡೀ ನಡೆಯಿತು ಎಂದು ಭುಜಬಲ್ ತಿಳಿಸಿದ್ದಾರೆ. 15 ಗಂಟೆಗಳ ಕಾರ್ಯಚರಣೆಯ ನಂತರ 17 ನೃತ್ಯಗಾರರನ್ನು ಬಿಡುಗಡೆ ಮಾಡಲಾಗಿದೆ. ಬಾರ್ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ 3ವರು ಕೆಲಸಗಾರರನ್ನ ಬಂಧಿಸಲಾಗಿದೆ. ಈ ಸಂಬಂಧ ಅಂಧೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪೊಲೀಸರ ಕಣ್ ತಪ್ಪಿಸಲು ಡ್ಯಾನ್ಸ್ ಬಾರ್ನಲ್ಲಿ ಆಧುನಿಕ ಎಲೆಕ್ಟ್ರಾನಿಕ್ ಸಿಸ್ಟಮ್ನ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಪೊಲೀಸ್ ವಾಹನವು ಪ್ರದೇಶವನ್ನು ಪ್ರವೇಶಿಸಿದ ತಕ್ಷಣ, ಬಾರ್ನ ಹೊರಗೆ ಅಳವಡಿಸಲಾದ ಕ್ಯಾಮೆರಾಗಳು ಒಳಗಿರುವ ಹುಡುಗಿಯರನ್ನು ತಕ್ಷಣವೇ ಹೊರಕಳಿಸಲಾಗುತ್ತಿತ್ತು. ಅದರ ಎತ್ತರ ಎಷ್ಟಿತ್ತೆಂದರೆ ನಿಲ್ಲಲೂ ಕಷ್ಟವಾಗುತ್ತಿತ್ತು.
ಬಾರ್ನಲ್ಲಿ ನರ್ತಕರು ಇರುವ ಬಗ್ಗೆ ಬಲವಾದ ಮಾಹಿತಿಯ ನಂತರ, ತಡರಾತ್ರಿಯಲ್ಲಿ ಸ್ನಾನಗೃಹ, ಶೇಖರಣಾ ಕೊಠಡಿ, ಅಡುಗೆಮನೆಯಲ್ಲಿ ಎಲ್ಲೆಡೆ ದಾಳಿ ನಡೆಸಲಾಯಿತು, ಆದರೆ ಪೊಲೀಸ್ ತಂಡಕ್ಕೆ ಏನೂ ಪತ್ತೆಯಾಗಿಲ್ಲ. ಬಾರ್ನ ಮ್ಯಾನೇಜರ್, ಕ್ಯಾಷಿಯರ್, ವೇಟರ್ಗಳನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿದರೂ ಅವರು ಬಾರ್ನಲ್ಲಿ ಡ್ಯಾನ್ಸರ್ಗಳು ಎಂದು ನಿರಾಕರಿಸುತ್ತಲೇ ಇದ್ದರು.
ಅಷ್ಟರಲ್ಲಿ ಎನ್ ಜಿಒ ತಂಡದವರು ಮೇಕಪ್ ರೂಮಿಗೆ ಹೋದಾಗ ಅಲ್ಲಿ ದೊಡ್ಡ ಕನ್ನಡಿ ಇರುವುದು ಕಂಡಿತು. ಇದರಿಂದ ಅನುಮಾನಗೊಂಡ ಎನ್ ಜಿ ಓ ದವರು ದೊಡ್ಡ ಸುತ್ತಿಗೆಯಿಂದ ಗಾಜು ಒಡೆದು ನೆಲಮಾಳಿಗೆ ಕಂಡುಹಿಡಿಯಲಾಗಿದೆ.
ಗಾಜು ಒಡೆದ ತಕ್ಷಣ ಪೊಲೀಸರು ಬೆಚ್ಚಿಬಿದ್ದಿದ್ದರು…. ಅದರ ಹಿಂದೆ ಗುಹೆಯಂತಹ ದೊಡ್ಡ ರಹಸ್ಯ ಕೊಠಡಿ ಇತ್ತು, ಅದರ ಒಳಗಡೆ 17 ಬಾರಿ ನರ್ತಕಿಯನ್ನು ಅದರಲ್ಲಿ ಅಡಗಿಸಿಟ್ಟಿದ್ದರು. ಇದಾದ ನಂತರ ಹೆಣ್ಣುಮಕ್ಕಳನ್ನ ನೆಲಮಾಳಿಗೆಯಿಂದ ಕರೆತರಲಾಗಿದೆ.