ದಟ್ಟ ಮಂಜಿನಿಂದಾಗಿ ಬರೋಬ್ಬರಿ 20 ವಾಹನಗಳ ಮಧ್ಯೆ ಸರಣಿ ಅಪಘಾತ ನಡೆದಿರುವ ಘಟನೆ ನಡೆದಿದೆ.
ಈ ಘಟನೆ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಘಟನಾ ಸ್ಥಳಕ್ಕೆ ತೆರಳಿದ್ದರು. ದೆಹಲಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಬೆಳಿಗ್ಗೆ ಕನಿಷ್ಠ 110 ವಿಮಾನಗಳು ಮತ್ತು 25 ರೈಲುಗಳ ಅಡೆತಡೆಗೆ ಕಾರಣವಾಗಿವೆ.
ಮಂಜಿನಿಂದಾಗಿ ರೈಲು, ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ದೆಹಲಿಯಲ್ಲಿ ತೀವ್ರ ಮಂಜಿನಿಂದಾಗಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ವಿಭಾದಲ್ಲಿಯೇ ಉಳಿದಿದೆ. ಗಾಳಿಯ ಗುಣಮಟ್ಟ ಮಾಪಕದ 500ರಷ್ಟಿದೆ.