೧. ಪೂಜೆಯನ್ನು ಒಂದೇ ಮನೆಯಲ್ಲಿರುವ ಎಲ್ಲಾ ಮಹಿಳೆಯರು ಸೇರಿ ಮಾಡಬೇಕು.
೨. ಪೂಜೆ ಮಾಡುವ ಅಥವಾ ಪಾಲ್ಗೊಳ್ಳುವ ಯಾವುದೇ ಮಹಿಳೆಯರು ಬಹಿಷ್ಠೆಯಾಗಿರಬಾರದು.
೩. ಅಶುಭ ಹಾಗೂ ಶುಭ ಸೂತಕಗಳು ಇರಬಾರದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
೪. ಮದುವೆಯಾಗದ ಹೆಣ್ಣು ಮಕ್ಕಳೂ ಈ ವ್ರತದಲ್ಲಿ ಭಾಗವಹಿಸಬಹುದು.
೫. ಆದಷ್ಟೂ ಕೃತಕ ವಸ್ತುಗಳ ಬಳಕೆಯನ್ನು ಮಾಡಬಾರದು, ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಬೇಡ.
೬. ಒಮ್ಮೆ ಪೂಜಿಸಿದ ನಂತರ ವಿಸರ್ಜನೆಗೆ ಮೊದಲು ಪದೇಪದೇ ದೇವಿಯ ಕಲಶ ಅಥವಾ ವಿಗ್ರಹವನ್ನು ಸ್ಪರ್ಶಿಸಬಾರದು.
೭. ಯಾವುದೇ ಕಾರಣಕ್ಕೂ ಮಡಿಯಿಲ್ಲದೇ ಮಾಡಿದ ಆಹಾರವನ್ನು ನೈವೇದ್ಯಕ್ಕೆ ಇಡಬಾರದು.
೮. ಆಡಂಬರದ ಅಲಂಕಾರಕ್ಕಿಂತ ಆನಂದದ ಅಲಂಕಾರಕ್ಕೆ ದೇವಿ ಬಹುಬೇಗ ಒಲಿಯುತ್ತಾಳೆ.
ವರ ಮಹಾಲಕ್ಷ್ಮೀ ವ್ರತಕ್ಕೆ ಬೇಕಿರುವ ಸಾಮಗ್ರಿಗಳು ಯಾವುವು
೧. ಹಣ್ಣುಗಳು ೫ ವಿಧಗಳು: ದಾಳಿಂಬೆ, ಸೇಬುಗಳು, ಸೀತಾಫಲ, ಮೂಸಂಬಿ, ಸಪೋಟ. ಇತರೆ ಲಭ್ಯವಿರುವ ಹಣ್ಣುಗಳು.
೨. ಹೂವುಗಳು ೫ ವಿಧಗಳು: ಮಲ್ಲಿಗೆ, ತಾವರೆ, ಜಾಜಿ, ಕೇದಗೆ, ನೈದಿಲೆ,ಪಾರಿಜಾತ, ಸೇವಂತಿಗೆ, ಸುಗಂಧರಾಜ, ಸಂಪಿಗೆ, ಕರವೀರ, ಕಣಗಿಲೆ….
೩. ಪತ್ರೆಗಳು ೫ ವಿಧಗಳು: ಮರುಗ, ದವನ, ಬಿಲ್ವಪತ್ರೆ, ವಿಷ್ಣು ಕ್ರಾಂತಿ, ಕರವೀರ, ಇತರ…
೪. ಅರಶಿನ, ಕುಂಕುಮ, ಚಂದನ, ಶ್ರೀಗಂಧ, ಕಾಡಿಗೆ, ಕರಿಮಣಿ ತಾಳಿ, ಕುಬುಸದ ಖಣ, ಸೀರೆ, ಒಡವೆಗಳು…
೫. ತುಪ್ಪ, ಮೊಸರು, ಎಳನೀರು, ಜೇನುತುಪ್ಪ, ಹಾಲು, ಸಕ್ಕರೆ, ಪಂಚಪಲ್ಲವ, ಕರ್ಪೂರ, ಕೇಸರಿ, ಅಕ್ಕಿ, ಬೆಲ್ಲ.
೬. ರಂಗೊಲಿ ಪುಡಿ, ಬತ್ತಿ, ತುಪ್ಪದ ಬತ್ತಿ, ಗೋಟಡಿಕೆ, ತುಂಡಡಿಕೆ.
೭. ಕಲಶ, ಮುಖವಾಡ(ಇದ್ದಲ್ಲಿ) ದೀಪಗಳು(೨,೪,೬,೮,) ತಟ್ಟೆ, ಕೌಳಿಗೆ ಸೌಟು,
೮. ಗೆಜ್ಜೆ ವಸ್ತ್ರ, ಉಪವೀತ, ಬಾಳೆ ಎಲೆಗಳು (೫) ಎಳೆಬಾಳೆ ಕಂದುಗಳು(೨) ಅರಿಶಿಣದ ಕೊಂಬುಗಳು.
೯. ತೆಂಗಿನಕಾಯಿಗಳು(೬) (ಗಣಪತಿ ನೈವೇದ್ಯ, ಮಹಾಲಕ್ಷ್ಮೀ ನೈವೇದ್ಯ, ಗಂಗಾ ನೈವೇದ್ಯ ಹಾಗೂ ಕಲಶಕ್ಕೆ, ಮಹಾಲಕ್ಷ್ಮಿ ಕಲಶಕ್ಕೆ,) ಮುತ್ತೈದೆಯರಿಗೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಹೇಗೆ
ದಿಕ್ಕು: ಮೊದಲಿಗೆ ಕಲಶ ಸ್ಥಾಪನೆಗೆ ಪ್ರಶಸ್ಥವಾದ ಜಾಗ ಹಾಗೂ ದಿಕ್ಕನ್ನು ಆರಿಸಿಕೊಳ್ಳಬೇಕು.
೧.ಪೂರ್ವಾಭಿಮುಖ: ಶ್ರೀದೇವಿಯನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿದಲ್ಲಿ ಹಸಿರು ಸೀರೆಯಿಂದ ಅಲಂಕರಿಸಿ.
೨.ಉತ್ತರಾಭಿಮುಖ: ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿದಲ್ಲಿ ಬಿಳಿ ಅಥವಾ ಬಂಗಾರದ ವರ್ಣದ ಸೀರೆಯಿಂದ ಅಲಂಕರಿಸಿ.
೩. ತುಂಬಿದ ಕೊಡದ ನೀರಿನಿಂದ ನಿಗದಿಪಡಿಸಿದ ಜಾಗವನ್ನು ಶುಚಿಗೊಳಿಸಬೇಕು ಸಾಧ್ಯವಾದಲ್ಲಿ ಸ್ವಲ್ಪ ಗೋಮಯದಿಂದ ಶುಚಿಗೊಳಿಸಿ.
೪. ಸ್ವಚ್ಛವಾದ ಮೇಲೆ ನೆಲದ ಮೇಲೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು.
೫. ಆ ರಂಗವಲ್ಲಿಯ ಮೇಲೆ ಪೀಠವನ್ನು ಪ್ರತಿಷ್ಟಾಪಿಸಬೇಕು.
೬. ಈಗ ಪೀಠದ ಮೇಲೆ ತುದಿ ಬಾಳೆಯೆಲೆಯನ್ನು ಇಡಬೇಕು. ಈ ಬಾಳೆಯೆಲೆಯನ್ನು ಮನುಷ್ಯರಿಗಿಡುವಂತೆ ಇಡದೇ ವಿರುದ್ಧ ದಿಕ್ಕಿನಲ್ಲಿಡಬೇಕು, ಇಲ್ಲವೇ ತುದಿ ಮುಂಭಾಗಕ್ಕೆ ಬರುವಂತೆ ಉದ್ದಕ್ಕೆ ಇಡಬೇಕು.
೭. ಬಾಳೆಎಲೆಯ ಮೇಲೆ ಮತ್ತೊಮ್ಮೆ ಅಷ್ಟದಳ ರಂಗವಲ್ಲಿಯನ್ನು ಬಿಡಿಸಬೇಕು.
೮. ನಂತರ ೩,೫,೬,೮,೯ ಸೇರು ಅಕ್ಕಿಯನ್ನು ಬಾಳೆಯೆಲೆಯ ಮೇಲೆ ಹರಡಬೇಕು. ಹೀಗೆ ಹರಡಿದ ಅಕ್ಕಿಯಮೇಲೆ ತಟ್ಟೆ ಅಥವಾ ಗೋಲದ ಬಟ್ಟಲನ್ನಿಟ್ಟು ಅದರಲ್ಲಿ ಅಕ್ಕಿ ತುಂಬಬೇಕು ಇದರೊಂದಿಗೆ ಗೋಡಂಬಿ, ದ್ರಾಕ್ಷಿ, ಬಾದಾಮಿ, ಉತ್ತುತ್ತಿ ಇತ್ಯಾದಿ ಒಣ ಹಣ್ಣುಗಳನ್ನು ಸೇರಿಸಬೇಕು
೯. ಇದರ ಮೇಲೆ ಕಲಶವನ್ನಿಟ್ಟು ಕಲಶಕ್ಕೆ ಮೊದಲಿಗೆ ನೀರನ್ನು ಹಾಕಿ (ಏಳು ಪವಿತ್ರ ಕ್ಷೇತ್ರಗಳ ಪುಷ್ಕರಣಿ ನೀರು ಅಥವಾ ಸಮುದ್ರದ ನೀರು ಅಥವಾ ಬಾವಿಯ ಶುಧ್ಧವಾದ ನೀರು (ಅದರಲ್ಲೂ ಆಮೆಯಿರುವ ಬಾವಿ ನೀರು ಶ್ರೇಷ್ಠ) ತುಂಬಿರಿ.
೧೦. ತುಂಬಿದ ಕಲಶಕ್ಕೆ ಅರಶಿಣ, ಕುಂಕುಮ, ಶ್ರೀಗಂಧ, ಚಂದನ, ಒಂದು ಬೆಳ್ಳಿ ನಾಣ್ಯ ಒಂದು ಚಿನ್ನದ ಚೂರು, ಸ್ವಲ್ಪ ಅಕ್ಕಿ ಸೇರಿಸಬೇಕು.
೧೧. ಹೀಗೆ ತಯಾರಾದ ಕಲಶಕ್ಕೆ ಪೂಜಿಸುವ ಮೊದಲು ತುಳಸೀ ಪೂಜೆಯನ್ನು ಮಾಡಬೇಕು. ತುಳಸಿಯನ್ನು ಪೂಜಿಸಿ ನೈವೇದ್ಯ ಸಲ್ಲಿಸಿದ ಬಳಿಕ ಲಕ್ಷ್ಮೀ ಹೆಜ್ಜೆ ಗಳನ್ನು ರಂಗೋಲೆಯಲ್ಲಿ ಬಿಡಿಸಿ ಗಂಗೆಯನ್ನು ಪೂಜಿಸಿ ಲಕ್ಷ್ಮಿಯನ್ನು ಮನೆಯೊಳಕ್ಕೆ ಆಹ್ವಾನಿಸಬೇಕು.
೧೨. ಹೀಗೆ ಅಹ್ವಾನಿಸಿದ ಗಂಗೆಯನ್ನು ಮಹಾಲಕ್ಷ್ಮಿಯ ಮೂಲ ಕಲಶಕ್ಕೆ ಬೆರೆಸಬೇಕು.
೧೩. ಗಣಪತಿ ಪೂಜೆಯನ್ನು ಮಾಡಿ ಲಕ್ಷ್ಮಿಗೆ ಷೋಡಶೋಪಚಾರದಿಂದ ಪೂಜಿಸಬೇಕು.
೧೪. ಶ್ರೀ ಮಹಾಲಕ್ಷ್ಮಿ ಯನ್ನು ಅಲಂಕರಿಸುವಾಗ ಜಾಗ್ರತೆಯಾಗಿರಬೇಕು. ಆಭರಣಗಳನ್ನು ಮೊದಲೇ ಸ್ವಚ್ಛವಾಗಿ ತೊಳೆದು ನಂತರ ಅರಿಶಿಣದ ನೀರಲ್ಲಿ ಒಂದು ದಿನ ನೆನೆಯಿಸಿ ಇಟ್ಟು ನಂತರ ಶೃಂಗಾರಕ್ಕೆ ಬಳಸವುದು ಯೋಗ್ಯ. ಪ್ರತ್ಯೇಕ ಆಭರಣ/ಮೀಸಲು ಆಭರಣ ಇಟ್ಟಿದ್ದರೆ ಅದನ್ನಷ್ಟೇ ಉಪಯೋಗಿಸಬೇಕು.
೧೫. ಪೂಜೆಯ ನಂತರ ಬ್ರಾಹ್ಮಣರಿಗೆ ತೆಂಗಿನಕಾಯಿ ಹಾಗೂ ವಸ್ತ್ರದೊಂದಿಗೆ ತಾಂಬೂಲ ಗೌರವ/ಉಪಾಯನ ದಾನ ನೀಡಿದರೆ ಒಳ್ಳೆಯದು.
೧೬. ಮುತ್ತೈದೆಯರಿಗೆ ಮೊರದ ಬಾಗಿನ ಕೊಟ್ಟು ಕನ್ಯೆಯರಿಗೆ ತಾಂಬೂಲ ಗೌರವ ಕೊಡಬಹುದು.
೧೭. ತಾಂಬೂಲ ನೀಡುವಾಗ ಬಾಳೆಹಣ್ಣು ಹಾಗೂ ತೆಂಗಿನಕಾಯಿಯ ಜುಟ್ಟು ನೀಡುವವರ ಕಡೆಗಿರುವಂತೆ ನೀಡಿದರೆ ಒಳ್ಳೆಯದು.
ಕಲಶ ವಿಸರ್ಜನೆಯ ವಿಧಾನ ಹೇಗೆ
ಪೂಜಾನಂತರ ಕಲಶವನ್ನು ಯಾವ ದಿಕ್ಕಿನಲ್ಲಿ ಸ್ಥಾಪಿಸಿರುತ್ತೀರೋ ಆ ದಿಕ್ಕಿನ ರಂಗವಲ್ಲಿ ಗೆರೆಯನ್ನು ಬಳಿದ ನಂತರ ಕಲಶದ ಬಲಭಾಗದ ಹೂವನ್ನು ಬೀಳಿಸಬೇಕು ಆಮೇಲೆ ಕಲಶವನ್ನು ಬಲದಿಂದ ಎಡಕ್ಕೆ ಮೂರು ಸಲ ಎರಡೂ ಕೈಯಿಂದ ಸರಿಸಿ ನಂತರ ಎತ್ತಿ ಇರಿಸಬೇಕು.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564