ಕಾರವಾರ : ಸಮುದ್ರ ಅಧ್ಯಯನಕ್ಕೆಂದು ತೆರಳಿದ್ದ ಹಡಗು ನೀರಿನಲ್ಲಿ ಮುಳುಗುತ್ತಿದ್ದ ವೇಳೆ ರಕ್ಷಿಸಲಾಗಿದ್ದು, ಅದರಲ್ಲಿನ 36 ಜನರ ಪ್ರಾಣ ಉಳಿದಂತಾಗಿದೆ.
ಗೋವಾದಿಂದ (Goa) ಸಮುದ್ರ ಅಧ್ಯಯನಕ್ಕೆಂದು ತೆರಳಿದ್ದ ನೌಕೆ ನೌಕೆಯ ಎಂಜಿನ್ ವೈಫಲ್ಯದಿಂದಾಗಿ ಈ ಅವಘಡ ಸಂಭವಿಸಿದ್ದು, 36 ಜನರನ್ನು ಭಾರತೀಯ ಕೋಸ್ಟ್ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಗೋವಾ – ಕಾರವಾರ (Karwar) ಗಡಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ನ್ಯಾಷನಲ್ ಓಷಿಯಾನೋಗ್ರಾಫಿಕ್ ಇನ್ಸ್ಟಿಟ್ಯೂಟ್ (NIO) ಹಡಗು ಸಂಶೋಧನೆ ಕೇಂದ್ರದ ‘ಸಿಂಧು ಸಾಧನ’ ಹಡಗಿನಲ್ಲಿ 36 ಜನರು ಪಣಜಿಯಿಂದ ಹೊರಟು ಅರಬ್ಬಿ ಸಮುದ್ರದ ಮೂಲಕ ಕಾರವಾರ ಬಂದರಿಗೆ ತೆರಳುವ ವೇಳೆ ವೈಫಲ್ಯ ಉಂಟಾಗಿದೆ.
ಹಡಗು (Ship) ಮುಳುಗುವ ಹಂತ ತಲುಪಿದ್ದಾಗ ಭಾರತೀಯ ಕೋಸ್ಟ್ಗಾರ್ಡ್ನ ಸಿಐಆರ್, ಎನ್ಐಒ ಹಡಗಿನಿಂದ ರಕ್ಷಣಾ ಕಾರ್ಯಾಚರಣೆ ಮಾಡಿ ಮುಳುಗುತಿದ್ದ ಹಡಗಿನ ಸಮೇತ ಗೋವಾದಲ್ಲಿರುವ ವಾಸ್ಕೊದ ಬಂದರಿಗೆ ಕರೆತರಲಾಗುತ್ತಿದೆ.