ಬೆಂಗಳೂರು : ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ ಫ್ಯಾನ್ ಗೆ ನೇಣು ಹಾಕಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಈ ಘಟನೆ ನಗರದ ಯಲಹಂಕ ಉಪನಗರ 3 ನೇ ಹಂತದಲ್ಲಿ ನಡೆದಿದೆ. ಪತಿ- ಪತ್ನಿ ಮಧ್ಯೆ ಜಗಳ ನಡೆದಿದ್ದು, ಕಿರಾತಕನೇ ಕೊಲೆ ಮಾಡಿದ್ದಾನೆ. ನಂತರ ಪತ್ನಿಯನ್ನು ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತು ಹಾಕಿದ್ದಾನೆ. ರೇಖಾ ಪಾಪಿ ಪತಿಯಿಂದಲೇ ಹತ್ಯೆಯಾದ ಮೃತ ಪತ್ನಿ. ಆರೋಪಿ ಪತಿಯನ್ನು ಸಂತೋಷ್ ಎನ್ನಲಾಗಿದೆ.
ವರದಕ್ಷಿಣೆ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದು ಕೊಲೆಯಾಗಿದೆ ಎಂದು ಶಂಕಿಸಲಾಗಿದೆ. ಸಂತೋಷ್ ಪತ್ನಿ ರೇಖಾಳನ್ನು ಕೊಲೆ ಮಾಡಿದ ನಂತರ ಸೀರೆಯಿಂದ ಫ್ಯಾನಿಗೆ ನೇಣು ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ. ಪತಿ ಸಂತೋಷ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.