ಭುವನೇಶ್ವರ: ಅನ್ನ ಮಾಡಿಲ್ಲವೆಂಬ ಕಾರಣಕ್ಕೆ ಪಾಪಿಯೊಬ್ಬ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಒಡಿಶಾದ ಸಂಬಲ್ ಪುರ ಜಿಲ್ಲೆಯ ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪತ್ನಿ ಕರಿ ಮಾಡಿದ್ದಾಳೆ. ಆದರೆ, ಪತಿರಾಯ ಕರಿ (Curry) ಜೊತೆಗೆ ಅನ್ನ (Cooking Rice) ಮಾಡಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.
ಆರೋಪಿ ಪತಿ ಸನಾತನ ಧಾರುವಾ (40)ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಪತ್ನಿ ಪುಷ್ಪಾ (35) ಎಂದು ಗುರುತಿಸಲಾಗಿದೆ. ದಂಪತಿಗೆ ಓರ್ವ ಮಗಳು ಹಾಗೂ ಒಬ್ಬ ಮಗನಿದ್ದು, ಮಗಳು ಕುಚಿಂದಾದಲ್ಲಿ ಮನೆಗೆಲಸ ಮಾಡುತ್ತಿದ್ದಾಳೆ. ಮಗ ಘಟನೆ ನಡೆದ ದಿನ ರಾತ್ರಿ ಮಲಗಲು ಸ್ನೇಹಿತನ ಮನೆಗೆ ತೆರಳಿದ್ದ ಎನ್ನಲಾಗಿದೆ.
ಧಾರುವಾ ಭಾನುವಾರ ತನ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಕರಿ ಜೊತೆಗೆ ಅನ್ನ ಮಾಡಿಲ್ಲವೆಂದು ಜಗಳ ತೆಗೆದಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಪತಿ ಪುಷ್ಪಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಗನು ಬೆಳಿಗ್ಗೆ ಮನಗೆ ಬಂದಾಗ ಈ ಘಟನೆ ತಿಳಿದಿದೆ. ಆ ನಂತರ ಪೊಲೀರಿಗೆ ಮಗ ಮಾಹಿತಿ ನೀಡಿದ್ದಾನೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.








