ಮೈಸೂರು: ಸಹೋದರಿ ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವಕನೊಬ್ಬ ತನ್ನ ತಂಗಿ ಹಾಗೂ ತಾಯಿಯನ್ನೂ ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಹುಣಸೂರು (Hunsur) ತಾಲ್ಲೂಕಿನ ಮರೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಧನುಶ್ರೀ (Dhanushri)(19) ಹಾಗೂ ಅನಿತಾ (Anita)(43) ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ.
ನಿತಿನ್ ಕೃತ್ಯ ಎಸಗಿದ ವ್ಯಕ್ತಿ ಎನ್ನಲಾಗಿದೆ. ಧನುಶ್ರೀ ಮತ್ತು ಅನಿತಾರನ್ನು ನೆಂಟರ ಮನೆಗೆ ಕರೆದುಕೊಂಡು ಹೋಗುವುದಾಗಿ ಕೆರೆ ದಡಕ್ಕೆ ಕರೆದುಕೊಂಡು ಬಂದು, ಕೆರೆಗೆ ತಳ್ಳಿದ್ದಾನೆ. ಆನಂತರ ತಂದೆಗೆ ಈ ವಿಷಯ ತಿಳಿಸಿದ್ದಾನೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








