ತಂದೆಯ ಎದುರೇ ಮಗನೊಬ್ಬ ಆತ್ಮಹತ್ಯೆಗೆ ಯತ್ನಿಸಿದಾಗ ಪೊಲೀಸರು ಸಮಯ ಪ್ರಜ್ಞೆ ಮೆರೆದು ಆತನನ್ನು ಕಾಪಾಡಿರುವ ಘಟನೆ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಯುವಕನೊಬ್ಬ ತನ್ನ ತಂದೆಯ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದಯವಿಟ್ಟು ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡ ಎಂದು ತಂದೆ ಗೋಗರೆದರೂ ತಂದೆಯ ಮಾತನ್ನು ಕೇಳದೆ ನದಿಗೆ ಹಾರುವ ನಿರ್ಧಾರವನ್ನು ಮಾಡುತ್ತಾನೆ. ಆಗ ಸಮಯ ಪ್ರಜ್ಞೆಯಿಂದ ಪೊಲೀಸ್ ಕಾನ್ಸ್ಟೇಬಲ್ ಶಿವ ಶ್ಯಾಮ್ ಯುವಕನನ್ನು ಎಳೆದು ಪ್ರಾಣ ರಕ್ಷಿಸಿದ್ದಾರೆ.
गंगा पुल, कानपुर नगर।
नीचे हाथ जोड़े बैठा व्यक्ति युवक का पिता है।
और जरा सा मौका मिलते ही आरक्षी शिव श्याम ने पलक झपकते उसे खींच लिया। ❤️#Salute #UPPolice #KanpurNagar pic.twitter.com/LRWRCr2sYs
— SACHIN KAUSHIK (@upcopsachin) August 6, 2024
ಈ ವಿಡಿಯೋವನ್ನು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್ (upcopsachin) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ತಂದೆ ಕೈ ಮುಗಿದು ಕೇಳಿಕೊಂಡರೂ ಮಾತು ಕೇಳದ ಮಗ ಬ್ರಿಡ್ಜ್ ಮೇಲೆ ನಿಂತು ನದಿಗೆ ಹಾರಲು ಯತ್ನಿಸುತ್ತಿದ್ದ. ಆ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರು ಬಂದು ನದಿಗೆ ಹಾರಲು ಯತ್ನಿಸಿದ ಯುವಕನನ್ನು ಕ್ಷಣಾರ್ಧದಲ್ಲಿ ರಕ್ಷಿಸಿದ್ದಾರೆ.