ರಾಮಮಂದಿರ(Ram Mandir)ದಲ್ಲಿ ಪ್ರಾಣ ಪ್ರತಿಷ್ಠೆಯ ಸಿದ್ಧತೆ ಭರ್ಜರಿಯಾಗಿದ್ದು, ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಮಂದಿರದಲ್ಲಿ ವೈದಿಕ ಆಚರಣೆಗಳು ಆರಂಭಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ಈ ಮಧ್ಯೆ ಅಫ್ಘಾನಿಸ್ತಾನ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಿಂದ ಶ್ರೀರಾಮ ದೇವಾಲಯಕ್ಕೆ ಉಡುಗೊರೆಗಳು ಬರುತ್ತಿವೆ.
2 ಕೆಜಿ ಕುಂಕುಮದ ಜತೆಗೆ ಕಾಬೂಲ್ ನದಿಯ ನೀರನ್ನು ಕೂಡ ಕಳುಹಿಸಿದ್ದಾರೆ. ಯುವಕನೊಬ್ಬ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್ನಿಂದ ಭಾರತಕ್ಕೆ ಕಳುಹಿಸಿದ್ದಾರೆ.