ತಂದೆಯ ಅಸ್ಥಿಪಂಜರದೊಂದಿಗೆ 3 ತಿಂಗಳು ವಾಸವಿದ್ದ ಮಗ
ಮೂರು ತಿಂಗಳಿಂದ ತಂದೆಯ ಶವದೊಂದಿಗೆ ಮಗ ಮನೆಯಲ್ಲಿ ವಾಸವಾಗಿರುವ ವಿಚಿತ್ರ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್ ವರದಿ ಪ್ರಕಾರ, ಸಂಗ್ರಾಮ್ ಡೇ (70) ಮತ್ತು ಕೌಶಿಕ್ ಡೇ (40) ಇಬ್ಬರು ತಂದೆ ಮತ್ತು ಮಗ ಆಗಿದ್ದಾರೆ. ಕೋಲ್ಕತ್ತಾದ ಕೆಪಿ ರಾಯ್ ಲೇನ್ನಲ್ಲಿ ವಾಸಿಸುತ್ತಿದ್ದಾರೆ. ಮಗ ಕೌಶೀಕ್ ಮಾನಸಿಕ ಅಸ್ವಸ್ಥರಂತೆ ಕಾಣಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಸಂಗ್ರಾಮ್ ಡೇ ಅವರು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು. ಕೆಪಿ ರಾಯ್ ಲೇನ್ನಲ್ಲಿರುವ ಅವರ ನಿವಾಸದಿಂದ ಪೊಲೀಸರು ಅವರ ಮೃತದೇಹವನ್ನು (ಅಸ್ಥಿಪಂಜರ) ವಶಪಡಿಸಿಕೊಂಡಿದ್ದಾರೆ.
“ವಿಚಾರಣೆಯ ಸಮಯದಲ್ಲಿ, ಡೇ ಅವರ ಮಗ ಕೌಶಿಕ್ ತನ್ನ ತಂದೆ ಮೂರು ತಿಂಗಳ ಹಿಂದೆ ನಿಧನರಾದರು ಎಂದು ಬಹಿರಂಗಪಡಿಸಿದರು. ಆದರೆ, ಶವಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿನ ನಿಜವಾದ ಸಮಯ ದೃಢೀಕರಿಸಲು ಸಾಧ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆರೆ ಸಂತ್ರಸ್ಥರ ಸಹಾಯಕ್ಕೆ ಧಾವಿಸಿದ ರಾಜ್ಯ ಸರ್ಕಾರ 418 ಕೋಟಿ ಬಿಡುಗಡೆ
ಬರಲಿದೆ B H (ಭಾರತ್) ಸರಣಿಯ ವಾಹನ ನೊ0ದಾವಣಿ ನಂಬರ್ ಪ್ಲೇಟ್