ಬಾಲಕಿ ಮೇಲೆ ಶಾಲೆಯಲ್ಲಿ ಅತ್ಯಾಚಾರವೆಸಗಿದ ಅಪರಿಚಿತನೋರ್ವ
ಮಹರಾಷ್ಟ್ರ: ಅಪರಿಚಿತ ಕಾಮುಕನೋರ್ವ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಹರಾಷ್ಟ್ರದ ಜಂಗಲಿ ಮಹಾರಾಜ್ ರಸ್ತೆಯಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ನಡೆದಿದೆ.
ಈ ಕುರಿತು ಸಂತ್ರಸ್ತೆಯ ತಾಯಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, ಬಾಲಕಿ ಪ್ರಸಿದ್ಧ ಜಂಗಲಿ ಮಹಾರಾಜ್ ರಸ್ತೆಯಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಳು. ಬುಧವಾರ ಎಂದಿನಂತೆ ಶಾಲೆಗೆ ಬಂದಾಗ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯೊಂದಿಗೆ ಪರಿಚಿತನಂತೆ ಮಾತನಾಡಿಸಿ, ಆಕೆಯನ್ನು ಬಲವಂತವಾಗಿ ಶಾಲೆಯ ಶೌಚ ಗೃಹಕ್ಕೆ ಕರೆದೊಯ್ದಿದ್ದಾನೆ.
ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಅಪರಾಧದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಬಾಲಕಿ ಶಾಲೆ ಮುಗಿಸಿ ಮನೆಗೆ ತೆರಳಿ, ಶಾಲೆಯಲ್ಲಿ ನಡೆದ ಘಟನೆಯನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ಪರಿಣಾಮ ಸಂತ್ರಸ್ತೆಯ ತಾಯಿ ಕೂಡಲೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಸಂಬಂಧ ಶಿವಾಜಿನಗರ ಪೊಲೀಸರು ಅತ್ಯಾಚಾರ ಪ್ರಕರಣ(ಪೋಕ್ಸೋ ಕೇಸ್) ದಾಖಲಿಸಿಕೊಂಡಿದ್ದಾರೆ.