ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ – Saaksha Tv
ರಾಯ್‍ಪುರ: ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಛತ್ತೀಸ್‍ಗಢದ ಜಶ್‍ಪುರದಲ್ಲಿ ನಡೆದಿದೆ.
ದಿನೇಶ್ ಕುಮಾರ್ ಲಕ್ಷ್ಮೆ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದ ಶಿಕ್ಷಕ. ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿತ್ತಾರೆ. ಗುರುವನ್ನು ದೈವತ್ವ ಭಾವದಿಂದ ಕಾಣುತ್ತಾರೆ ಆದರೆ ಈತ ಅಕ್ಷರಶಃ ರಾಕ್ಷಸನಾಗಿದ್ದ. ಮಾರ್ಚ್ 10 ರಂದು ಜಶ್‍ಪುರದ ಶಾಲೆವೊಂದರಲ್ಲಿ ದಿನೇಶ್ ಕುಮಾರ್ ಲಕ್ಷ್ಮೆ ಶಿಕ್ಷಕನಾಗಿದ್ದಾನೆ.
ಎಂದಿನಂತೆ ಯತಾ ಪ್ರಕಾರ ಮಾರ್ಚ್ 10 ರಂದು ಶಾಲೆ ಪ್ರಾರಂಭವಗಿದೆ. ಅಂದು ದಿನೇಶ್ ಕುಮಾರ್ ಲಕ್ಷ್ಮೆ ಶಾಲೆಗೆ ಮದ್ಯ ಸೇವಿಸಿ ಶಾಲೆಗೆ ಬಂದಿದ್ದಾರೆ. ಲಕ್ಷ್ಮೆ ಮದ್ಯದ ಅಮಲಿನಲ್ಲಿ ಶಾಲೆಗೆ ಬಂದವರೆ ಶಾಲೆಯ ಮೈದಾನದಲ್ಲಿ ನಿಂತಿದ್ದ ವಿದ್ಯಾರ್ಥಿಗೆ ಕ್ರಿಕೆಟ್ ಬ್ಯಾಟ್‍ನಿಂದ ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ.
ಇದೀಗ ಈ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಶಿಕ್ಷಕ ದಿನೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿಗಳು ಶನಿವಾರ ಕೆಲಸದಿಂದ ಅಮಾನತುಗೊಳಿಸಿದ್ದಾರೆ.