ಶಿಕ್ಷಕಿಯ ಖಾಸಗಿ ಭಾಗಗಳನ್ನು ಸೆರೆ ಹಿಡಿದ ವಿದ್ಯಾರ್ಥಿ
ಪುಣೆ: ಶಿಕ್ಷಕಿ ವಾಶ್ ರೂಂ ಗೆ ಹೋದಾಗ ವಿದ್ಯಾರ್ಥಿಯು ಶಿಕ್ಷಕಿಯ ಖಾಸಗಿ ಭಾಗಗಳನ್ನು ಮೊಬೈಲ್ ನಲ್ಲಿ ಸೆರೆಡಿದಿರುವ ಘಟನೆ ಪುಣೆಯ ಅಲಂಕಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
16 ವರ್ಷದ ವಿದ್ಯಾರ್ಥಿ 56 ವರ್ಷದ ಶಿಕ್ಷಕಿಯನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕಿ ವಿದ್ಯಾರ್ಥಿಗೆ ಮನೆಗೆ ಪಾಠ ಹೇಳಲು ಬಂದಾಗ ದೃಷ್ಕೃತ್ಯ ಎಸಗಿದ್ದಾನೆ.
ನಡೆದಿದ್ದೇನು? ಶಿಕ್ಷಕಿ ವಿದ್ಯಾರ್ಥಿಗೆ ಪಾಠ ಹೇಳಲು ಮನೆಗೆ ಬಂದಿದ್ದಾರೆ. ಮನೆಗೆ ಬಂದ ಶಿಕ್ಷಕಿ ಬಾತ್ ರೂಂಗೆ ಹೋಗಿದ್ದಾರೆ. ವಿದ್ಯಾರ್ಥಿ ಶಿಕ್ಷಕಿ ಹೋಗುವ ಮುಂಚೆಯೇ ವಾಶ್ ರೂಂ ನಲ್ಲಿ ಮೊಬೈಲ್ ಮರೆಮಾಡಿಟ್ಟಿದ್ದಾನೆ. ಇದನ್ನು ತಿಳಿಯದ ಶಿಕ್ಷಕಿ ವಾಶ್ ರೂ ಉಪಯೋಗಿಸಿದ್ದಾರೆ. ಆಗ ಅವರ ಖಾಸಗಿ ಭಾಗಗಳು ಸೆರೆಯಾಗಿವೆ.
ಅಲ್ಲದೇ ಶಿಕ್ಷಕಿ ವಿದ್ಯಾರ್ಥಿಗೆ ಪಾಠ ಮಾಡುವಾಗ ಅವರ ಎದೆಯ ಭಾಗವನ್ನು ಸೆರೆ ಹಿಡಿದಿದ್ದಾನೆ. ಇದನ್ನು ತಿಳಿದ ಶಿಕ್ಷಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ವಿದ್ಯಾರ್ಥಿ ವಿರುದ್ಧ ವಿರುದ್ಧ ಪ್ರಕರಣ ದಾಖಲಾಗಿದೆ.