ಜೈಪುರ: ಭೀಕರ ಅಪಘಾತವೊಂದು ಸಂಭವಿಸಿದ್ದು, ಒಂದೇ ಕುಟುಂಬದ 6 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಜಸ್ಥಾನದ (Rajasthan) ಬಿಕಾನೇರ್‌ನ ಮಹಾಜನ್‌ನ ಜೈತ್‌ಪುರ ಟೋಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನರು ಬಲಿಯಾಗಿದ್ದಾರೆ.
ಆರತಿ, ದುಬ್ಬು, ಭೂಮಿಕಾ, ನೀರಜ್ ಕುಮಾರ್ ಮತ್ತು ಶಿವಕುಮಾರ್ ಸಾವನ್ನಪ್ಪಿದ ದುರ್ದೈವಿಗಳು. ಸಾವನ್ನಪ್ಪಿದವರೆಲ್ಲ ಅಲ್ಲಿನ ಹನುಮಾನ್‌ಗಢ್ ನ ದಬ್ವಾಲಿ ನಿವಾಸಿಗಳು ಎನ್ನಲಾಗಿದೆ. ಹರಿಯಾಣದ ಪರವಾನಗಿ ಪ್ಲೇಟ್ ಹೊಂದಿರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಭೀಕರ ಅಪಘಾತಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಸಂದರ್ಭದಲ್ಲಿ ಇಬ್ಬರು ಪ್ರಯಾಣಿಕರು ಕಾರಿನಿಂದ ಹೊರಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿದೆ.