ಲಾರಿ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಘಟನೆಯಲ್ಲಿ ತಾಯಿ ಶಾಂತಲಕ್ಷ್ಮಿ (30) ಹಾಗೂ ಮಗಳು ಚಿನ್ಮಯಿ (5) ಸಾವನ್ನಪ್ಪಿದ ದುರ್ದೈವಿಗಳು. ಇವರು ನಗರದ ಕುಂಟಮ್ಮದ ತೋಟದ ನಿವಾಸಿಗಳು. ನಿನ್ನೆ ರಾತ್ರಿ 11ರ ವೇಳೆಗೆ ಭೀಮಸಂದ್ರದಲ್ಲಿ ಸಂಬಂಧಿಕರ ಮದುವೆ ಮುಗಿಸಿ ಆಟೋದಲ್ಲಿ ನಾಲ್ವರು ತುಮಕೂರು ನಗರಕ್ಕೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ತುಮಕೂರು ಕಡೆಯಿಂದ ಹೋಗುತ್ತಿದ್ದ ರಿಯ ಬ್ರೇಕ್ ಕಟ್ ಆಗಿ ಆಟೋಗೆ ಡಿಕ್ಕಿ ಹೊಡೆದಿದೆ.
ಮೃತ ಶಾಂತಲಕ್ಷ್ಮೀಯ ಪುತ್ರ ತನ್ಮಯ್ ಹಾಗೂ ಆಟೋ ಚಾಲಕ ಗಿರೀಶ್ ಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋ ಚಾಲಕ ಗಿರೀಶ್ ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








