ಎಲ್ಲ ಚಿತ್ರಮಂದಿರಗಳಲ್ಲೂ ‘ಪುಷ್ಪ 2’ ಸಿನಿಮಾದ ಹವಾ ಜೋರಾಗಿದೆ. ಅಲ್ಲು ಅರ್ಜನ್ ನಟನೆಯ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ 5 ದಿನಗಳಲ್ಲಿ ಬರೋಬ್ಬರಿ 922 ಕೋಟಿ ರೂ. ಹಣ ಬಾಚಿಕೊಂಡಿದೆ.
ಈ ಸಿನಿಮಾದ ಪ್ರತಿ ಫ್ರೇಮ್ ನಲ್ಲಿ ಅದ್ದೂರಿತನ ಕಾಣಿಸಿಕೊಂಡಿದೆ. ಅಭಿಮಾನಿಗಳು ಭರ್ಜರಿಯಾಗಿ ಚಿತ್ರವನ್ನು ಸ್ವೀಕರಿಸುತ್ತಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ನಟನೆ ಕೂಡ ಪ್ರಶಂಸೆ ಪಡೆಯುತ್ತಿದೆ. ಹೀಗಾಗಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದ್ದು, ಈಗಾಗಲೇ ಸಾವಿರ ಕೋಟಿ ರೂ. ಸನಿಹಕ್ಕೆ ಬಂದು ನಿಂತಿದೆ.
ವಿಶ್ವದಾದ್ಯಂತ ಕೂಡ ಈ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 5ರಂದು ವಿಶ್ವಾದ್ಯಂತ ‘ಪುಷ್ಪ 2’ ಬಿಡುಗಡೆ ಆಗಿದೆ. ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ‘ಪುಷ್ಪ 2’ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದ ಪ್ರತಿ ದಿನದ ಕಲೆಕ್ಷನ್ ಬಗ್ಗೆ ಸ್ವತಃ ಸಂಸ್ಥೆಯೇ ಮಾಹಿತಿ ನೀಡಿದೆ. ‘ಪುಷ್ಪ 2’ ಸಿನಿಮಾ ಒಟ್ಟು 5 ದಿನಗಳಲ್ಲಿ ಬರೋಬ್ಬರಿ 922 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಲು ಇನ್ನು 78 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಅನಾಯಾಸವಾಗಿ ಈ ಚಿತ್ರ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.