ಸಫಾರಿಗೆ ಹೋದವರ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ದೃಶ್ಯದಲ್ಲಿ ಹುಲಿಯ ತಪ್ಪು ಇಲ್ಲ ಎನಿಸುತ್ತಿದ್ದು, ಹುಲಿಯನ್ನು ಕಂಡು ಸಫಾರಿಯಲ್ಲಿದ್ದ ಯುವಕರೇ ಕರ್ಕಶವಾಗಿ ಕಿರುಚಿ ಹುಲಿಗೆ ಕಿರಿಕಿರಿ ಮಾಡಿದ್ದಾರೆ. ಇದಕ್ಕೆ ಬೆದರಿದ ಹುಲಿ ಯುವಕರತ್ತ ದಾಳಿಗೆ ಮುಂದಾಗಿದೆ.
ಪ್ರಾಣಿಗಳನ್ನು ಕಂಡಾಗ ಸುಮ್ಮನಿರದೇ ಪ್ರಚೋದಿಸಿದ್ದಾರೆ. ಈ ವಿಡಿಯೋದಲ್ಲಿ ಕರ್ಕಶವಾಗಿ ಕಿರುಚಾಡಿ ಹುಲಿಗೆ ಹಿಂಸೆ ನೀಡಿದ್ದರಿಂದ ಅದು ಪ್ರಚೋದನೆಗೊಂಡಿದೆ. ಒಂದು ವೇಳೆ ಆ ಹುಲಿ ನಮ್ಮ ಮನೆಗೆ ಬಂದು ನಾವು ಮಾಡಿದ ರೀತಿಯಲ್ಲೇ ಅದೂ ಮಾಡುತ್ತಿದ್ದರೆ ನಾವೇನು ಮಾಡುತ್ತಿದ್ವಿ? ಇದೇ ಪ್ರಶ್ನೆಯನ್ನು ವಿಡಿಯೋ ಟ್ವೀಟ್ ಮಾಡಿದ ವ್ಯಕ್ತಿ ಕೂಡ ಪ್ರಶ್ನಿಸಿದ್ದಾರೆ.
Striped monk gets irritated 😣
What will you do if at every designated hours people crash into your house as their matter of right? pic.twitter.com/4RDCVLWiRR— Susanta Nanda (@susantananda3) April 26, 2023
ಈ ವಿಡಿಯೋದಲ್ಲಿ ಗಮನಿಸಿದಂತೆ, ವಾಹನದಲ್ಲಿದ್ದ ವ್ಯಕ್ತಿಯೊಬ್ಬ ಅಸಹ್ಯವಾಗಿ ಕಿರುಚಾಡಿದ್ದರಿಂದ ಹುಲಿ ದಾಳಿಗೆ ಮುಂದಾಗಿದೆ. ಒಂದು ವೇಳೆ ಚಾಲಕ ವಾಹನವನ್ನು ಮುಂದಕ್ಕೆ ಚಲಿಸದೆ ಇದ್ದಿದ್ದರೆ, ಹುಲಿ ದಾಳಿ ಮಾಡುವುದರಲ್ಲಿ ಸಂಶಯವೇ ಇರಲಿಲ್ಲ. ಇನ್ನಾದರೂ ಮೃಗಾಲಯ, ಉದ್ಯಾನವನಗಳಿಗೆ ಸಫಾರಿಗೆ ತೆರಳುವ ಪ್ರವಾಸಿಗರು ಮೌನವಾಗಿ ಕಾಡುಪ್ರಾಣಿಗಳ ಚಲನವಲನಗಳನ್ನು ಗಮನಿಸಿ, ಅನುಭವಿಸಿ ಬರುವುದನ್ನು ಕಲಿಯಬೇಕು ಎಂಬುವುದನ್ನು ಈ ವಿಡಿಯೋ ಪಾಠ ಕಲಿಸಿದೆ.